Saturday, September 12, 2026
spot_imgspot_img
spot_imgspot_img

ಕನ್ಯಾನ ಸರ್ಕಾರಿ ಕಾಲೇಜಿನಲ್ಲಿ ಬೇರು-ನೀರು ಮಾಹಿತಿ ಕಾರ್ಯಕ್ರಮ

- Advertisement -
- Advertisement -

ಕನ್ಯಾನ, ಏಪ್ರಿಲ್ 11: ವಿದ್ಯಾರ್ಥಿಗಳಲ್ಲಿ ಪರಿಸರದ ಕಾಳಜಿಯೊಂದಿಗೆ ನೀರನ್ನು ಮಿತವಾಗಿ ಬಳಸಿ ಜಲ ಸಂರಕ್ಷಣೆಯ ಜವಾಬ್ದಾರಿಯನ್ನು ಮೂಡಿಸುವ ಉದ್ದೇಶದಿಂದ ಕನ್ಯಾನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ವತಿಯಿಂದ ‘ನೀರು-ಬೇರು’ ಎಂಬ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬಂಟ್ವಾಳದ ಎಸ್.ವಿ. ಎಸ್. ಶಾಲೆಯ ಸಹಶಿಕ್ಷಕಿ ಶ್ರೀಮತಿ ಕೀರ್ತನಾ ಅವರು ವಿದ್ಯಾರ್ಥಿಗಳಿಗೆ ನೀರಿನ ಮಹತ್ವವನ್ನು ತಿಳಿಸುತ್ತಾ, ‘ನೀರು ಉಳಿಸಿದರೆ ಭವಿಷ್ಯ ಉಳಿಯುತ್ತದೆ’ ಎಂಬ ಸಂದೇಶವನ್ನು ನೀಡಿದರು. ಜೊತೆಗೆ ಇಂದಿನ ದಿನಗಳಲ್ಲಿ ನೀರಿನ ಕೊರತೆ ಹೆಚ್ಚುತ್ತಿದ್ದು, ಅದನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಚೈತ್ರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿ ಸ್ನೇಹಾ ಎನ್. ಸ್ವಾಗತಿಸಿ, ಇಶ್ಮಿತಾ ಮತ್ತು ಬಳಗ ಪ್ರಾರ್ಥಿಸಿ, ಪೂಜಾ ವಂದಿಸಿ, ಶರಣ್ಯ ನಿರೂಪಿಸಿದರು.

- Advertisement -

Related news

error: Content is protected !!