- Advertisement -
- Advertisement -


ಕೇಪು: ಕೇಪು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಸಿಂಹ ಮಾಸದ ಕೊನೆಯ ಬಲಿವಾಡು ಕೂಟವು ಸೆ.12ರಂದು ಶನಿವಾರ ನಡೆಯಲಿದೆ.ಈ ಪ್ರಯುಕ್ತ ಗ್ರಾಮ ದೇವರಾದ ಶ್ರೀ ಸುಬ್ರಾಯ ದೇವರಿಗೆ ಸಾಮೂಹಿಕ ಪ್ರಾರ್ಥನೆ, ಸೀಯಾಳಾಭಿಷೇಕ ಹಾಗೂ ಪಂಚಾಮೃತಾಭಿಷೇಕ ಸೇರಿದಂತೆ ವಿವಿಧ ಸೇವೆಗಳು ನೆರವೇರಲಿವೆ.


ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ಸೇವೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಅನುವಂಶೀಕ ಮುಕ್ತಸರರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


ವಿಶೇಷ ಸೂಚನೆ: ಅಭಿಷೇಕಕ್ಕೆ ಅಗತ್ಯವಿರುವ ಸೀಯಾಳವನ್ನು ಸೆ.12ರಂದು ಬೆಳಗ್ಗೆ 10 ಗಂಟೆಯೊಳಗೆ ಕ್ಷೇತ್ರಕ್ಕೆ ತಂದು ಒಪ್ಪಿಸುವಂತೆ ತಿಳಿಸಲಾಗಿದೆ.
- Advertisement -








