ಪುತ್ತೂರು ನಗರ ಸಭಗೆ ರೋಷನ್ ರೋಷನ್ ರೈ ಬನ್ನೂರು ಸೇರಿ 5 ಜನ ಕಾಂಗ್ರೆಸ್ ಕಾರ್ಯಕರ್ತರನ್ನು ನಾಮ ನಿರ್ದೇಶನ ಗೊಳಿಸಲು ಶಾಸಕರಾದ ಅಶೋಕ್ ಕುಮಾರ್ ರೈ ಯವರು ಸರಕಾರ ಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ರೋಷನ್ ರೈ ವರ ಹೆಸರು ಕೈ ಬಿಟ್ಟು ಬಾಕಿ 4 ಜನರನ್ನು ನಗರ ಸಭಾ ಸದಸ್ಯರಾಗಿ ನಾಮ ನಿರ್ದೇಶನ ಗೊಳಿಸಿ ಸರಕಾರ ಆದೇಶ ಮಾಡಿತ್ತು.
ಸದರಿ ನೇಮಕಾತಿ ಮೊದಲು ಶಾಸಕರ ಪ್ರಸ್ತಾವನೆಯಲ್ಲಿದ್ದ 5 ಜನರ ಬಗ್ಗೆ ಪೊಲೀಸ್ ವೆರಿಫಿಕೇಷನ್ ಗೆ ಬಂದ ಸಂದರ್ಭದಲ್ಲಿ ರೋಷನ್ ರೈ ಯವರ ಮೇಲೆ ಒಂದು ಕ್ರಿಮಿನಲ್ ಪ್ರಕರಣ ಕೋರ್ಟ್ ನಲ್ಲಿದೆ ಎಂದಿದ್ದರು ಅಂದಿನ ಎಸ್ ಪಿ ರಿಶ್ಯಂತ್.
ರೋಷನ್ ರೈ ಯವರನ್ನು ನಾಮ ನಿರ್ದೇಶನಗೊಳಿಸಲು ಶಿಫ್ಫಾರಸ್ಸು ಮಾಡಿದ್ದರೂ, ಯಾರದೊ ಕೈವಾಡದಿಂದ ಸರಕಾರ ಹೊರಡಿಸಿರುವ ಆದೇಶದಲ್ಲಿ ರೋಷನ್ ರೈ ಯವರ ಹೆಸರು ಕಾಣೆಯಾಗಿತ್ತು.
ಆದರೆ ಶಾಸಕ ಅಶೋಕ್ ಕುಮಾರ್ ರೈ ಯವರು ಇದನ್ನು ಪ್ರತಿಷ್ಠೆ ಯಾಗಿ ತೆಗೆದು ಕೊಂಡು ಇಲಾಖೆಯ ಮುಖ್ಯಸ್ಥರಿಗೆ ಹಾಗೂ ಪೌರಾಡಳಿತ ಸಚಿವರೊಂದಿಗೆ ಚರ್ಚಿಸಿ ರೋಷನ್ ರೈ ಯವರನ್ನು ನಗರ ಸಭಾ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಿ ಸರಕಾರದಿಂದ ಆದೇಶ ಹೊರಡಿಸಲು ಸಫಲರಾಗಿರುತ್ತಾರೆ.ಪುತ್ತೂರು ಕೋಟಿ – ಚೆನ್ನಯ್ಯ ಕಂಬಳ ಸಮಿತಿ ಉಪಾಧ್ಯಕ್ಷರಾಗಿರುವ ರೋಷನ್ ರೈ ಯವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಬನ್ನೂರು ಬೂತ್ ಸಮಿತಿ ಅಧ್ಯಕ್ಷ ರಾಗಿ, ನಗರ ಕಾಂಗ್ರೆಸ್ ವಲಯ 1 ರ ಉಸ್ತುವಾರಿಯಾಗಿ ಪಕ್ಷ ಸಂಘಟನೆ ತೊಡಗಿಸಿಕೊಂಡಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಓರ್ವ ಪಕ್ಷದ ಕಾರ್ಯಕರ್ತನನ್ನು ಹಠ ತೊಟ್ಟು ನಾಮ ನಿರ್ದೇಶನಗೊಳಿಸಿದ ಶಾಸಕ ಅಶೋಕ್ ಕುಮಾರ್ ರೈ ಯವರಿಗೆ ಕಾರ್ಯಕರ್ತರು ಅಭಿನಂದನೆಗಳು ಸಲ್ಲಿಸಿದ್ದಾರೆ.