Sunday, April 28, 2024
spot_imgspot_img
spot_imgspot_img

ವಿಟ್ಲ: ಕಬ್ಸ್ -ಬುಲ್ ಬುಲ್ಸ್ ಉತ್ಸವ, ಸೌಟ್ಸ್-ಗೈಡ್ಸ್ ಮೇಳ ಮತ್ತು ರೋವರ್‍ಸ್- ರೇಂಜರ್‍ಸ್ ಸಮಾಗಮ

- Advertisement -G L Acharya panikkar
- Advertisement -

ವಿಟ್ಲ: ಭಾರತ್ ಸೌಟ್ಸ್ ಮತ್ತು ಗೈಡ್ಸ್ ನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ವಿಟ್ಲ ಘಟಕದ ಆಶ್ರಯದಲ್ಲಿ ಡಿ.7ರಿಂದ 10 ರ ತನಕ ವಿಟ್ಠಲ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿರುವ ಕಬ್ಸ್-ಬುಲ್ ಬುಲ್ಸ್ ಉತ್ಸವ, ಸೈಟ್ಸ್-ಗೈಡ್ಸ್ ಮೇಳ ಮತ್ತು ರೋವರ್‍ಸ್- ರೇಂಜರ್‍ಸ್ ಸಮಾಗಮ ಒಳಗೊಂಡ ಜಿಲ್ಲಾ ಕ್ಯಾಂಪೋರಿ 2023- 2024 ಉದ್ಘಾಟನಾ ಸಮಾರಂಭ ನಡೆಯಿತು.

ಲಯನ್ಸ್ ಜಿಲ್ಲೆ 317 ಡಿ ಉಪಗವರ್ನರ್ ಕುಡ್ಲಿ ಅರವಿಂದ ಶೆಣೈರವರು ರೋವರ್‍ಸ್- ರೇಂಜರ್‍ಸ್ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಶುಭಹಾರೈಸಿದರು.

ಭಾರತ ಸೌಟ್ಸ್ ಗೈಡ್ಸ್ ನ ಸ್ಥಳೀಯ ಸಂಸ್ಥೆ ಯ ಅಧ್ಯಕ್ಷ ಸುದರ್ಶನ ಪಡಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್, ವಿಟ್ಲ ಪ.ಪಂ.ಸದಸ್ಯ ರವಿಪ್ರಕಾಶ್, ಜಿಲ್ಲಾ ಸಂಘಟನ ಆಯುಕ್ತ ಶಾಂತಾರಾಮ, ದೈಹಿಕ ಪರಿವೀಕ್ಷಣಾತ್ಮಕಾರಿ ವಿಷ್ಣು ಹೆಬ್ಬಾರ್, ವಿಟ್ಠಲ ಪ.ಪೂ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಶಿಬಿರ ನಿರ್ದೇಶಕ ಉದಯ ಕುಮಾರ್, ಜಿಲ್ಲಾ ತರಬೇತಿ ಆಯುಕ್ತ ಪ್ರತಿಮ್ ಕುಮಾರ್ ಕೆ.ಎಸ್., ರೇಂಜರ್ಸ್ ವಿಭಾಗದ ನಾಯಕಿ ಡಾ. ಅಪರ್ಣಾ, ಉದ್ಯಮಿ ಸುಬ್ರಾಯ ಪೈ, ಸ್ವಾಗತ ಸಮಿತಿಯ ಅಧ್ಯಕ್ಷ ದಂಬೆಕಾನ ಪ್ರಭಾಕರ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತೀಪ್ ಎ.ಆರ್. ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತ ಸೌಟ್ಸ್ ಗೈಡ್ಸ್ ಶಿಕ್ಷಕರಾದ ಸತ್ಯನಾರಾಯಣ ಭಟ್ ಅಳಿಕೆ, ಸದಾಶಿವ ಹೊಳ್ಳ ಅಡ್ಯನಡ್ಕ, ಜೆಸಿಂತಾ ಸೋಫಿಯಾ ಮಸ್ಕರೇನ್ಹಸ್, ಗಿರಿಯಪ್ಪ ಗೌಡ ಚಂದಳಿಕೆ, ಲೀನಾ ರಾಡ್ರಿಗಸ್ ಅವರನ್ನು ಗೌರವಿಸಲಾಯಿತು. ವಿಟ್ಲದ ವಿಟ್ಠಲ ಪದವಿಪೂರ್ವ ಕಾಲೇಜು, ವಿಟ್ಠಲ ಪ್ರೌಢಶಾಲೆ, ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸರಕಾರಿ ಪ್ರೌಢಶಾಲೆ ( ಆರ್ ಎಂಎಸ್ ಎ), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಂತ ರೀಟಾ ಹಿರಿಯ ಪ್ರಾಥಮಿಕ ಶಾಲೆಗಳು ಕ್ಯಾಂಪೋರಿಗೆ ಸಹಯೋಗ ನೀಡಿವೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಜಿ.ಕಜೆ ಸ್ವಾಗತಿಸಿದರು. ಸ್ಥಳೀಯ ಸಂಸ್ಥೆ ಕೋಶಾಧಿಕಾರಿ – ಚಂದಳಿಕೆ ಶಾಲೆ ಮುಖ್ಯೋಪಾದ್ಯಾಯ ವಿಶ್ವನಾಥ ಗೌಡ ಕುಳಾಲು ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ನಾಯ್ಕ್ ಉಪಸ್ಥಿತರಿದ್ದರು. ಸ್ಥಳೀಯ ಸಂಸ್ಥೆ ಜತೆ ಕಾರ್ಯದರ್ಶಿ ಜಯಶ್ರೀ ವಂದಿಸಿದರು.

- Advertisement -

Related news

error: Content is protected !!