Saturday, June 27, 2026
spot_imgspot_img
spot_imgspot_img

ಆರ್​ಎಸ್ಎಸ್​ ಮುಖಂಡನೊಬ್ಬನಿಂದ ಸ್ವಂತ ಅಪ್ರಾಪ್ತ ಮಗಳ ಮೇಲೆಯೇ ನಿರಂತರ ಅತ್ಯಾಚಾರ

- Advertisement -
- Advertisement -

ಭೋಪಾಲ್: ಆರ್​ ಎಸ್ ​ಎಸ್​ ಮುಖಂಡನೊಬ್ಬ ಅಪ್ರಾಪ್ತ ವಯಸ್ಸಿನ ತನ್ನ ಸ್ವಂತ ಮಗಳ ಮೇಲೆಯೇ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಈ ಅಮಾನವೀಯ ಘಟನೆ ಮಧ್ಯಪ್ರದೇಶದ ಪೊವಾಯ್ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ವಾರಿ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಆರ್‌ಎಸ್‌ಎಸ್ ಮುಖಂಡ ಸತೀಶ್ ಮಿಶ್ರಾ ಎಂದು ಗುರುತಿಸಲಾಗಿದೆ.

ತಂದೆಯೇ ತನ್ನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದನೆಂದು 17 ವರ್ಷದ ಅಪ್ರಾಪ್ತ ಬಾಲಕಿ, ಪೊಲೀಸ್ ಠಾಣೆ ತಲುಪಿ ಅಲ್ಲಿ ತನ್ನ ತಂದೆಯ ದುಷ್ಕೃತ್ಯಗಳನ್ನು ವಿವರಿಸಿ ಪೊವಾಯ್ ಠಾಣೆಗೆ ದೂರು ನೀಡಿದ್ದಾಳೆ. ಬಾಲಕಿಯ ದೂರಿನ ಮೇರೆಗೆ ಪೊಲೀಸರು ಸಂಬಂಧಪಟ್ಟ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ದುಷ್ಟ ತಂದೆಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!