ವಿಟ್ಲ: ದ.ಕ ಜಿಲ್ಲೆಯಲ್ಲಿ ಕೋರೋನಾ ವ್ಯಾಪಕವಾಗುತ್ತಿದ್ದು ವಿಟ್ಲ ಪರಿಸರದಲ್ಲೂ ಹಲವು ಕೊರೋನಾ ಪಾಸಿಟಿವ್ ವರದಿಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಸಾಲೆತ್ತೂರಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 6 ಸೋಮವಾರದಿಂದ ಸಾಲೆತ್ತೂರಿನಾದ್ಯಂತ ಮುಂದಿನ ತೀರ್ಮಾನದವರೆಗೆ ಪ್ರತಿದಿನ ಮಧ್ಯಾಹ್ನ 2ರಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ತೀರ್ಮಾನಿಸಲಾಗಿದೆ.
ಬೆಳಿಗ್ಗೆ 7ರಿಂದ ಮಧ್ಯಾಹ್ನ 2ರ ವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ತೆರೆಯಲಿದ್ದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕರಿಸಬೇಕಾಗಿ ವಿನಂತಿಸಿದ್ದಾರೆ.
ಅಗತ್ಯ ವಸ್ತುಗಳು ಸಾಲೆತ್ತೂರಿನಲ್ಲಿ ದೊರೆಯಲಿರುವುದರಿಂದ ಯಾರೂ ಹೊರಗಡೆ ಹೋಗದಂತೆ ತೀರ್ಮಾನಿಸಲಾಗಿದೆ.
ಕೊರೋನಾ ವಾರಿಯರ್ಸ್ ಗಳಾದ ಹಲವು ವೈದ್ಯರು, ಲ್ಯಾಬ್ ಟೆಕ್ನೀಶಿಯನ್ಗಳು, ಪೋಲೀಸ್ ಅಧಿಕಾರಿಗಳು, ಶಾಸಕರು, ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರೂ ಕೂಡಾ ಕೋವಿಡ್ 19 ಗೆ ತುತ್ತಾಗಿದ್ದಾರೆ.
ಹಲವರ ಕೋವಿಡ್ ಸಂಪರ್ಕ ಮೂಲಗಳೇ ಇನ್ನೂ ಕೂಡಾ ನಿಗೂಢವಾಗಿದೆ. ಐಸೋಲೇಶನ್ ವಾರ್ಡ್ ಗಳು ಈಗಾಗಲೇ ತುಂಬಿದೆ. ಇನ್ನು ಕೊರೋನಾ ಅಟ್ಟಹಾಸ ಹೀಗೆಯೇ ಮುಂದುವರಿದರೆ ನಮ್ಮ ಜಿಲ್ಲೆಯ ಪರಿಸ್ಥಿತಿಯನ್ನು ಊಹಿಸಲು ಅಸಾಧ್ಯ. ಸೃಷ್ಟಿಕರ್ತನು ನಮೆಲ್ಲರನ್ನು ಕಾಪಾಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.