Saturday, May 18, 2024
spot_imgspot_img
spot_imgspot_img

ರಾತ್ರೋರಾತ್ರಿ ಹೆಸರು ಬದಲಾಯಿಸಿಕೊಂಡ ನಟಿ ಸಮಂತಾ ಅಕ್ಕಿನೇನಿ; ಹೊಸ ಹೆಸರೇನು..?

- Advertisement -G L Acharya panikkar
- Advertisement -

ಸಮಂತಾ ಅಕ್ಕಿನೇನಿಖ್ಯಾತ ನಟಿ ಸಮಂತಾ ಅಕ್ಕಿನೇನಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮದುವೆ ಬಳಿಕವೂ ಅವರ ಬೇಡಿಕೆ ಕಿಂಚಿತ್ತೂ ತಗ್ಗಿಲ್ಲ. ಬಹುಭಾಷಾ ಕಲಾವಿದೆಯಾಗಿ ಅವರು ಧೂಳೆಬ್ಬಿಸುತ್ತಿದ್ದಾರೆ. ಈ ವರ್ಷ ಬಿಡುಗಡೆಯಾದ ‘ದಿ ಫ್ಯಾಮಿಲಿ ಮ್ಯಾನ್​ 2’ ಯಶಸ್ಸಿನಿಂದಾಗಿ ಸಮಂತಾ ಖ್ಯಾತಿ ದುಪ್ಪಟ್ಟಾಗಿದೆ. ಈ ನಡುವೆ ಅವರ ಹೆಸರು ಬದಲಾವಣೆಯ ಕಾರಣಕ್ಕಾಗಿ ಸುದ್ದಿ ಆಗುತ್ತಿದ್ದಾರೆ. ಹೌದು, ರಾತ್ರೋರಾತ್ರಿ ಸಮಂತಾ ಹೆಸರು ಬದಲಾಯಿಸಿಕೊಂಡಿದ್ದಾರೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸ್ವತಃ ಸಮಂತಾ ಕಡೆಯಿಂದಲೇ ಇದಕ್ಕೆ ಸ್ಪಷ್ಟನೆ ಸಿಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಅಂದಹಾಗೆ, ಸಮಂತಾ ಹೆಸರು ಬದಲಾಯಿಸಿಕೊಂಡಿರುವುದು ಸೋಶಿಯಲ್​ ಮೀಡಿಯಾದಲ್ಲಿ. ಟ್ವಿಟರ್​ ಮತ್ತು ಇನ್​ಸ್ಟಾಗ್ರಾಮ್​ನಲ್ಲಿ ಸಮಂತಾ ಅಕ್ಕಿನೇನಿ ಎಂದಿದ್ದ ತಮ್ಮ Display Name ಅನ್ನು ಕೇವಲ S ಎಂದು ಬದಲಾಯಿಸಿಕೊಂಡಿದ್ದಾರೆ. ಯಾವುದೇ ಸೂಚನೆ ನೀಡದೇ ಅವರು ಹೀಗೆ ಏಕಾಏಕಿ ಹೆಸರು ಬದಲಾಯಿಸಿಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಈಗ ಎಲ್ಲರ ಮನದಲ್ಲೂ ಮೂಡಿದೆ. 2017ಕ್ಕಿಂತ ಮೊದಲು ಸಮಂತಾ ರುತ್​ ಪ್ರಭು ಎಂದು ಅವರನ್ನು ಕರೆಯಲಾಗುತ್ತಿತ್ತು. ನಟ ಅಕ್ಕಿನೇನಿ ನಾಗ ಚೈತನ್ಯ ಜೊತೆ ಮದುವೆಯಾದ ಬಳಿಕ ಸಮಂತಾ ತಮ್ಮ ಹೆಸರನ್ನು ಸಮಂತಾ ಅಕ್ಕಿನೇನಿ ಎಂದು ಬದಲಾಯಿಸಿಕೊಂಡರು. ಸೋಶಿಯಲ್​ ಮೀಡಿಯಾ ಖಾತೆಗಳಲ್ಲೂ ಸಮಂತಾ ಅಕ್ಕಿನೇನಿ ಎಂದೇ ಗುರುತಿಸಿಕೊಳ್ಳಲು ಆರಂಭಿಸಿದ್ದರು. ಆದರೆ ಈಗ ಅದರ ಬದಲಿಗೆ ಕೇವಲ ‘ಎಸ್​’ ಅಕ್ಷರವನ್ನು ಇಟ್ಟುಕೊಂಡಿರುವುದು ನಿಜಕ್ಕೂ ಕೌತುಕ ಮೂಡಿಸಿದೆ.

ಕೆಲವೊಮ್ಮೆ ಸೆಲೆಬ್ರಿಟಿಗಳು ಯಾವುದಾದರೂ ಬ್ರ್ಯಾಂಡ್​ ಅಥವಾ ಸಿನಿಮಾದ ಪ್ರಚಾರಕ್ಕಾಗಿ ಸೋಶಿಯಲ್​ ಮೀಡಿಯಾದಲ್ಲಿ ಈ ರೀತಿ ಹೆಸರು ಬದಲಾಯಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಹಿಂದೆ ಅನೇಕ ನಟ-ನಟಿಯರು ಇಂಥ ಪ್ರಯೋಗ ಮಾಡಿದ್ದರು. ಸಮಂತಾ ಕೂಡ ಅಂಥದ್ದೇ ಕಾರಣಕ್ಕಾಗಿ Display Name ಬದಲಾಯಿಸಿಕೊಂಡಿರಬಹುದೇ ಎಂಬ ಅನುಮಾನ ಮೂಡುತ್ತಿದೆ. ಆದರೆ ಇದೆಲ್ಲದಕ್ಕೂ ಸ್ವತಃ ಸಮಂತಾ ಕಡೆಯಿಂದಲೇ ಸೂಕ್ತ ಉತ್ತರ ಸಿಗಬೇಕಿದೆ. ಫೇಸ್​ಬುಕ್​ನಲ್ಲಿ ಅವರು ಇನ್ನೂ ಈ ಬದಲಾವಣೆ ಮಾಡಿಕೊಂಡಿಲ್ಲ.

ಸದ್ಯ ಸಮಂತಾ ಕೈಯಲ್ಲಿ ಹಲವು ಆಫರ್​ಗಳಿವೆ. ವಿಜಯ್​ ಸೇತುಪತಿ, ನಯನತಾರ ಜೊತೆಗಿನ ಹೊಸ ತಮಿಳು ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ನಯನತಾರ ಬಾಯ್​ಫ್ರೆಂಡ್​ ವಿಘ್ನೇಶ್​ ಶಿವನ್​ ನಿರ್ದೇಶನ ಮಾಡುತ್ತಿದ್ದಾರೆ. ಬಹುನಿರೀಕ್ಷಿತ ‘ಶಾಕುಂತಲಂ’ ಸಿನಿಮಾದಲ್ಲಿ ಅವರು ಶಕುಂತಲೆಯ ಪಾತ್ರ ಮಾಡುತ್ತಿದ್ದಾರೆ.

- Advertisement -

Related news

error: Content is protected !!