Thursday, June 25, 2026
spot_imgspot_img
spot_imgspot_img

ಯುವ ಸಾಹಿತಿ ಸಮ್ಯಕ್ತ್ ಜೈನ್ ಗೆ “ಸಾಹಿತ್ಯ ರತ್ನ” ರಾಜ್ಯ ಪ್ರಶಸ್ತಿ

- Advertisement -
- Advertisement -

ನೂಜಿಬಾಳ್ತಿಲ: ಫೆಬ್ರವರಿ 14 ರಂದು ಸುಳ್ಯದಲ್ಲಿ ನಡೆದ ಕವಿ ಸಂಗಮ- ಕವಿ ಸಂಭ್ರಮ ಕಾರ್ಯಕ್ರಮ ನಡೆದಲ್ಲಿ, ವಿವಿಧ ಹಿರಿಯ ಸಾಹಿತಿಗಳ ಸಮಕ್ಷಮದಲ್ಲಿ 2021ನೇ ಸಾಲಿನ “ಸಾಹಿತ್ಯ ರತ್ನ” ರಾಜ್ಯ ಪ್ರಶಸ್ತಿಯನ್ನು ಉದಯೋನ್ಮುಖ ಯುವ ಸಾಹಿತಿ ಸಮ್ಯಕ್ತ್ ಜೈನ್ ರವರಿಗೆ ನೀಡಲಾಯಿತು.

ಈ ವೇಳೆ ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಹರಿನರಸಿಂಹ ಉಪಾಧ್ಯಾಯ, ಮಹಾಂತಪ್ಪ ಮೇಟಿ ಗೌಡ ರಾಯಚೂರು, ಗುರುಢವಳೇಶ್ವರ ಹುಬ್ಬಳ್ಳಿ, ಭೀಮರಾವ್, ಸಾನು ಉಬರಡ್ಕ, ಸುಮಾ ಕಿರಣ್ ಉಡುಪಿ, ಆಶಮಯ್ಯ ಪುತ್ತೂರು, ಅನುರಾಧಾ ಶಿವಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.

ಸಮ್ಯಕ್ತ್ ಜೈನ್ ಕಿರಿ ವಯಸ್ಸಿನಲ್ಲಿಯೇ ಸಾಹಿತ್ಯ ಲೋಕದಲ್ಲಿ ಗೌರವ, ಬಹುಮಾನ ಹಾಗು ಸನ್ಮಾನಗಳಿಗೆ ಭಾಜನರಾಗಿದ್ದು , ಪ್ರಸ್ತುತ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸವನ್ನು ನೆಲ್ಯಾಡಿ ಸಾಫಿಯೆನ್ಶಿಯಾ ಬೆಥನಿ ಕಾಲೇಜು ನಲ್ಲಿ ಮುಂದುವರಿಸುತ್ತಿದ್ದಾರೆ. ಇವರು ನೂಜಿಬಾಳ್ತಿಲ ಹೊಸಂಗಡಿ ಬಸದಿ ಧರಣೇಂದ್ರ ಇಂದ್ರ ಹಾಗು ಮಂಜುಳಾ ರವರ ಸುಪುತ್ರ .

- Advertisement -

Related news

error: Content is protected !!