ಇಂದಿನಿಂದ ಜೂನ್ 30ರ ವರೆಗೆ ಗ್ರಾಹಕರಿಗೆ ವಿಶೇಷ ಆಕರ್ಷನೀಯ ಆಫರ್‌ಗಳು ಲಭ್ಯ





ವಿಟ್ಲ: ಕಳೆದ 5 ವರ್ಷಗಳಿಂದ ವಿಟ್ಲದ ಎಂಪಾಯರ್‌ಮಾಲ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಸಪ್ತ ಜ್ಯುವೆಲ್ಸ್ ಮಳಿಗೆಯು ಸ್ಥಳಾಂತರಗೊಂಡು, ಇಂದು ವಿಟ್ಲ ಸ್ಮಾರ್ಟ್ ಸಿಟಿ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು. ಉತ್ಕೃಷ್ಟ ವಿನ್ಯಾಸಗಳು, ಉತ್ತಮ ಆಯ್ಕೆಯ ಅವಕಾಶಗಳೊಂದಿಗೆ, ಸಂಪೂರ್ಣ ಹವಾ ನಿಯಂತ್ರಿತ ವಿಶಾಲ ಪಾರ್ಕಿಂಗ್ ವ್ಯವಸ್ಥೆಯನ್ನೊಳಗೊಂಡ ಸಪ್ತ ಜ್ಯುವೆಲ್ಸ್ ನೂತನ ಮಳಿಗೆಯನ್ನು ಬಂಗಾರು ಅರಸರು ವಿಟ್ಲ ಅರಮನೆ, ಹಾಗೂ ಕೇಶವ ಪ್ರಸಾದ್ ಮುಳಿಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಇವರು ರಿಬ್ಬನ್ ಕತ್ತರಿಸಿ, ನಂತರ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿ ಸಂಸ್ಥೆಗೆ ಶುಭಹಾರೈಸಿದರು.

2017 ರಲ್ಲಿ ವಿಟ್ಲದಲ್ಲಿ ಪ್ರಾರಂಭಗೊಂಡ ಸಪ್ತ ಜ್ಯುವೆಲ್ಸ್ ಕಳೆದ 5 ವರ್ಷದಿಂದ ವಿವಿಧ ವಿನ್ಯಾಸಭರಿತ ಚಿನ್ನಾಭರಣಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಾ ಗ್ರಾಹಕರ ಮನ ಗೆದ್ದಿದೆ. ಇನ್ನು ಮುಂದೆಯೂ ಹೆಚ್ಚಿನ ಆಯ್ಕೆ ಅವಕಾಶಗಳನ್ನು ವ್ಯವಸ್ಥಿತವಾಗಿ ನೀಡಬೇಕೆನ್ನುವ ಮಹದಾಸೆಯೊಂದಿಗೆ ವಿಟ್ಲದ ಹೃದಯ ಭಾಗದಲ್ಲಿರುವ ಸ್ಮಾರ್ಟ್ ಸಿಟಿ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ.

ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಸಂಕೀರ್ಣದ ಜಿತೇಶ್ ಜೈನ್, ಸಪ್ತ ಜ್ಯುವೆಲ್ಸ್ ನ ಗ್ರಾಹಕ ಬಂಧು ವಸಂತ ಕುಮಾರ್, ಸಂಸ್ಥೆಯ ಪಾಲುದಾರರಾದ ಅಜಕ್ಕಳ ಶ್ಯಾಮ್ ಭಟ್, ಸುದರ್ಶನ್ ಕುಮಾರ್ ಇರ್ಕಲಾಜೆ, ಶಿವಪ್ರಕಾಶ್ ಪಂಜಿಬಲ್ಲೆ, ದೇವಿಪ್ರಸಾದ್ ಚಂಗಲ್ಪಾಡಿ, ನಿಶಾ ಪ್ರಶಾಂತ ಸರಳಾಯ, ಕೃಷ್ಣ ಪ್ರಸಾದ್ ಕಡವ, ಗೋವಿಂದ ರಾಜ ಕಲ್ಲಮಜಲು, ಸುಕುಮಾರ ಕಲ್ಲಮಜಲು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಕೇಶವ ಪ್ರಸಾದ್ ಮುಳಿಯರವರು ಚಿನ್ನ ಖರೀದಿಸುವ ಮೂಲಕ ಸಂಸ್ಥೆಯ ಮೊದಲ ಗ್ರಾಹಕರಾಗಿ ಶುಭ ಹಾರೈಸಿದರು. ಸಂಸ್ಥೆಯ ಸಿಬ್ಬಂಧಿ ವರ್ಗ ಸೇರಿದಂತೆ ಹಲವಾರು ಗ್ರಾಹಕರು ಉಪಸ್ಥಿತರಿದ್ದರು.

ಇಂದಿನಿಂದ ಜೂನ್ 30 ರವರೆಗೆ ಗ್ರಾಹಕರಿಗಾಗಿ ವಿಶೇಷ ಆಫರ್‌ಗಳು ಸಪ್ತ ಜ್ಯುವೆಲ್ಸ್ ನಲ್ಲಿ ಲಭ್ಯವಿದ್ದು, ಚಿನ್ನಾಭರಣ ಗ್ರಾಂ.ಗೆ 100 ರೂ ಡಿಸ್ಕೌಂಟ್, ಹಾಗೂ ಬೆಳ್ಳಿ ಆಭರಣಗಳಿಗೆ ಶೇಕಡಾ 2 ರಷ್ಟು ರಿಯಾಯಿತಿ. ಚಿನ್ನಾಭರಣ ಖರೀದಿಗೆ 1 ಪವನ್ ನೆಕ್ಲೆಸ್ ಗೆಲ್ಲುವ ಅವಕಾಶ, ಇಂದಿನಿಂದ ಜೂನ್ 30 ರವರೆಗೆ ಸಪ್ತ ಅಕ್ಷಯ ಯೋಜನೆಗೆ ಸೇರ್ಪಡೆಗೊಳ್ಳುವ ಎಲ್ಲರಿಗೂ ವಿಶೇಷ ಉಡುಗೊರೆ, ಹಾಗೂ ಜೂನ್ 30ರವರೆಗೆ ಚಿನ್ನಾಭರಣಗಳ ಶುದ್ಧತೆಯನ್ನು ಉಚಿತವಾಗಿ ಪರೀಕ್ಷೆ ಮಾಡಿಕೊಡಲಾಗುವುದು.