Friday, April 26, 2024
spot_imgspot_img
spot_imgspot_img

ಸೀರೆಯುಟ್ಟು ವಿಮಾನ ಹಾರಾಟ ನಡೆಸಿದ್ದರು ಸರಲಾ..! ಭಾರತದ ಮೊದಲ ಮಹಿಳಾ ಪೈಲೆಟ್‌ಗೆ ಗೂಗಲ್ ಡೂಡಲ್ ಗೌರವ

- Advertisement -G L Acharya panikkar
- Advertisement -
driving

ಭಾರತದ ಮೊದಲ ಮಹಿಳಾ ಪೈಲಟ್ ಸರಲಾ ಠಕರಾಲ್ ಅವರ 107ನೇ ಜನ್ಮದಿನದ ಅಂಗವಾಗಿ ಗೂಗಲ್ ವಿಶೇಷ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಠಕರಾಲ್ ಅವರು 1914 ಆಗಸ್ಟ್ 8ರಂದು ದಿಲ್ಲಿಯಲ್ಲಿ ಜನಿಸಿದರು. ಪ್ರಸ್ತುತ ಪಾಕಿಸ್ತಾನದಲ್ಲಿರುವ ಲಾಹೋರ್‌ಗೆ ಟಕರಾಲ ವಾಸಸ್ಥಳ ಬದಲಿಸಿಕೊಂಡಿದ್ದರು. ಭಾರತೀಯ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆ ಪಡೆದಿರುವ ಠಕರಾಲ್ ಅವರು ವಿನ್ಯಾಸಕಿ ಮತ್ತು ಉದ್ಯಮಿ.

ಗಂಡನ ಕುಟುಂಬದ ಸ್ಪೂರ್ತಿಯಿಂದ ವಿಮಾನ ಚಾಲನೆ ಕಡೆ ಆಸಕ್ತಿ ಹೊಂದಿದ ಠಕರಾಲ್ 21ನೇ ವಯಸ್ಸಿಗೇ ವಿಮಾನದ ಕಾಕ್‌ಪಿಟ್ ಏರಿದ್ದಾರೆ. ಸಾಂಪ್ರದಾಯಿಕ ಸೀರೆಯ ಉಡುಗೆಯಲ್ಲಿ ಮೊದಲ ಬಾರಿಗೆ ವಿಮಾನ ಹಾರಾಟ ನಡೆಸಿದರು.

‘ಕಳೆದ ವರ್ಷ ಸರಲಾ ಠಕರಾಲ್ ಅವರ ಡೂಡಲ್‌ಅನ್ನು ಪ್ರಕಟಿಸಬೇಕು ಎಂದು ಯೋಜನೆ ಹಾಕಿಕೊಂಡಿದ್ದೆವು. ಆದರೆ ಕೇರಳದಲ್ಲಿ ನಡೆದ ವಿಮಾನ ದುರಂತದಿಂದ ಡೂಡಲ್ ಪ್ರಕಟಣೆಯನ್ನು ಮಾಡಿರಲಿಲ್ಲ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡವರಿಗೆ ಗೌರವ ನೀಡುವ ನಿಟ್ಟಿನಲ್ಲಿ ಸರಲಾ ಡೂಡಲ್ ಅನ್ನು ಪ್ರಕಟಿಸಿರಲಿಲ್ಲ. ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಬಾರಿ ಡೂಡಲ್ ಅನ್ನು ನಾವು ಪ್ರಕಟಿಸುವುದಿಲ್ಲ. ವಿಮಾನ ಚಾಲನೆಯಲ್ಲಿ ಮಹಿಳೆಯರಿಗೆ ಸ್ಪೂರ್ತಿ ನೀಡಿದ ಸರಲಾ ಅವರ 107ನೇ ಜನ್ಮದಿನದಂದು ಡೂಡಲ್ ಪ್ರಕಟಿಸಲು ನಿರ್ಧರಿಸಿದ್ದೆವು’ ಎಂದು ಗೂಗಲ್ ಹೇಳಿಕೊಂಡಿದೆ.

- Advertisement -

Related news

error: Content is protected !!