



ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ ಸಮಿತಿಯ ಅಧ್ಯಕ್ಷರಾಗಿ ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ ಆಯ್ಕೆಯಾಗಿದ್ದಾರೆ. ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ, ವಲಯ ಅಧ್ಯಕ್ಷರಾಗಿ, ಲಯನ್ಸ್ ಟ್ರಸ್ಟ್ ವಿಟ್ಲ ಇದರ ಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಲಯನ್ಸ್ ಕ್ಲಬ್ ನಲ್ಲಿ ಕ್ಯಾಬಿನೇಟಿನ ಅನೇಕ ಹುದ್ದೆಗಳನ್ನು ಯಶಸ್ವಿಯಾಗಿ ಕೆಲಸ ಮಾಡಿ ತೋರಿಸಿದ ಸತೀಶ್ ಕುಮಾರ್ ಆಳ್ವ ರವರು ಅನೇಕ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಧಾರ್ಮಿಕವಾಗಿ , ಅನೇಕ ದೈವಸ್ಥಾನ, ದೇವಸ್ಥಾನಗಳ ಜೀರ್ಣೋದ್ಧಾರ, ಹಾಗೂ ಭಜನಾ ಮಂದಿರಗಳ ಜೀರ್ಣೋದ್ಧಾರದ ಅಧ್ಯಕ್ಷರಾಗಿ ಶೈಕ್ಷಣಿಕವಾಗಿ, ಸಿರಿ ವಿದ್ಯಾಲಯ ಸಾಲೆತ್ತೂರು ಇದರ ಅಧ್ಯಕ್ಷರಾಗಿ, ಸಾಮಾಜಿಕವಾಗಿ ಕೊಡುಗೈ ದಾನಿಯಾಗಿರುವ ಸತೀಶ್ ಕುಮಾರ್ ಆಳ್ವಾ ಇರಬಾಳಿಕೆ ಇವರು ವಿಟ್ಲದಲ್ಲಿ ಉದ್ಯಮಿಯಾಗಿ ಹೆಸರುವಾಸಿಯಾದ ಇವರು ಶ್ರೀ ಸಾಯಿ ಗಣೇಶ್ ಇಂಡಿಯನ್ ಗ್ಯಾಸ್, ಸಾಯಿ ಗಣೇಶ್ ಆಟೋ ಫ್ಯೂಲ್, ಹಾಗೂ ಶ್ರೀ ಗಣೇಶ್ ಮೆಡಿಕಲ್ ವಿಟ್ಲ ಇದರ ಮಾಲಕರಾಗಿದ್ದಾರೆ.
23ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ – 2025 ಜನವರಿಯಲ್ಲಿ ಮಂಚಿ ಸರಕಾರಿ ಶಾಲೆ ಮಂಚಿ ಯಲ್ಲಿ ನಡೆಯಲಿದೆ.