Sunday, June 14, 2026
spot_imgspot_img
spot_imgspot_img

ಸವಣೂರು: ಬೈಕ್ ಹಾಗೂ ಕಾರುಗಳ ನಡುವೆ ಸರಣಿ ಅಪಘಾತ

- Advertisement -
- Advertisement -

ಸವಣೂರು: ಬೈಕ್ ಹಾಗೂ ಎರಡು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಸವಣೂರಿನಲ್ಲಿ ನಡೆದಿದೆ. ಬೈಕ್, ಸ್ವಿಫ್ಟ್ ಕಾರು ಹಾಗೂ ಆಲ್ಟೋ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ.

ಸವಣೂರು ಕಡೆಯಿಂದ ಕಾಣಿಯೂರು ಕಡೆ ತೆರಳುತ್ತಿದ್ದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ಕಾಣಿಯೂರು ಕಡೆಯಿಂದ ಸವಣೂರು ಕಡೆ ಬರುತ್ತಿದ್ದ ಬೈಕ್ ಗೆ ಮತ್ತು ಆಲ್ಟ್ ಕಾರಿಗೆ ಡಿಕ್ಕಿ ಹೊಡೆದಿದ್ದು ಘಟನೆಯಿಂದ ಬೈಕ್ ಸವಾರ ಗಾಯಗೊಂಡಿದ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಗಾಯಗೊಂಡ ಬೈಕ್ ಸವಾರನನ್ನು ಬೆಳಂದೂರು ಕೆಳಂಬಿರಿ ನಿವಾಸಿ ಚೇತನ್ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!