Sunday, June 14, 2026
spot_imgspot_img
spot_imgspot_img

ಸವಣೂರು: ಪಿಕಪ್-ಬೈಕ್ ನಡುವೆ ಅಪಘಾತ; ಸವಾರರಿಗೆ ಗಾಯ..!

- Advertisement -
- Advertisement -

ಸವಣೂರು: ಪಿಕಪ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಸವಣೂರು ಸಮೀಪ ಚಾಪಳ್ಳ ಎಂಬಲ್ಲಿ ನಡೆದಿದೆ.

ಗಾಯಗೊಂಡ ಬೈಕ್‌ ಸವಾರರನ್ನು ಕಾಣಿಯೂರು ಗ್ರಾಮದ ಪುಣ್ಣತ್ತಾರು ನಿವಾಸಿ ಭಾಸ್ಕರ (53) ಹಾಗೂ ಆಲಂಕಾರು ಗ್ರಾಮದ ಕೊಂಡಾಡಿಕೊಪ್ಪ ನಿವಾಸಿ ಪವನ್ (18) ಎಂದು ಗುರುತಿಸಲಾಗಿದೆ.

ಪುತ್ತೂರು ಕಡೆಯಿಂದ ಬರುತ್ತಿದ್ದ ಪಿಕಪ್ ಮತ್ತು ಪುತ್ತೂರು ಕಡೆಗೆ ಹೋಗುತ್ತಿದ್ದ ಬೈಕ್ ಮಧ್ಯೆ ಅಪಘಾತ ನಡೆದಿದ್ದು, ರಸ್ತೆಯಲ್ಲಿದ್ದ ಅಪಾಯಕಾರಿ ಗುಂಡಿಯನ್ನು ತಪ್ಪಿಸುವ ವೇಳೆ ಡಿಕ್ಕಿಯಾಗಿದೆ. ಭಾಸ್ಕರ ಅವರ ಮುಖ ಹಾಗೂ ತಲೆಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!