Sunday, June 14, 2026
spot_imgspot_img
spot_imgspot_img

ಸವಣೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ! – ಸೊಯೂಬ್ ಕೊತ್ವಾಲ್ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಸವಣೂರು: ಕಡಬ ತಾಲೂಕಿನ ಸವಣೂರು ಗ್ರಾಮದ ಮಣೆಮಜಲು ಮನೆಯ ಅಪ್ರಾಪ್ತ ಬಾಲಕಿಗೆ ಮೆಸ್ಕಾಂ ಉದ್ಯೋಗಿ ಸೊಯೂಬ್ ಕೊತ್ವಾಲ್ ಎಂಬಾತ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

ಪಿಯುಸಿ ವಿಧ್ಯಾಭ್ಯಾಸ ಮಾಡುತ್ತಿರುವ ಬಾಲಕಿಗೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಆಕೆಯು ಮುಖ ಪರಿಚಯದ ಕಾರಣಕ್ಕೆ ಈತನ ಫ್ರೆಂಡ್ ರಿಕ್ವೆಸ್ಟ್ ರಿಸೀವ್ ಮಾಡಿದ ಬಳಿಕ, ಆಕೆಯ ಬಳಿ ತನ್ನನ್ನು ಪ್ರೀತಿಸುವಂತೆ ಒತ್ತಡ ಹೇರಿ, ಅಸಭ್ಯವಾಗಿ ಸಂದೇಶ ರವಾನಿಸಿ ಇದರ ಜತೆಗೆ ತನ್ನ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದಾನೆ ಎಂಬ ಮಾತು ಬೆಳಕಿಗೆ ಬಂದಿದೆ.

ಇದರ ಜತೆಗೆ ಮನೆಯವರ ಕಣ್ಣು ತಪ್ಪಿಸಿ ಆತನನ್ನು ಭೇಟಿಯಾಗಬೇಕು, ಆತ ನೀಡುವ ಉಡುಗೊರೆಯನ್ನೂ ಸ್ವೀಕರಿಸಬೇಕು ಎಂಬಿತ್ಯಾದಿ ವಿಚಾರಗಳ ಮೂಲಕ ಏನೂ ಅರಿಯದ ಬಾಲಕಿ ಮೇಲೆ ಕಳೆದ ನಾಲ್ಕು ತಿಂಗಳುಗಳಿಂದಲೂ ಒತ್ತಡ ಹೇರುತ್ತಿದ್ದು, ಇದೀಗ ಬಾಲಕಿಯ ತಾಯಿಗೆ ಈ ವಿಚಾರ ತಿಳಿದು, ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯ ತಂದೆ ತಾಯಿ ಈ ಕುರಿತಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ನೀಡಿದ್ದಾರೆ.

- Advertisement -

Related news

error: Content is protected !!