Saturday, April 20, 2024
spot_imgspot_img
spot_imgspot_img

SBI ವಿನೂತನ ಪ್ರಯೋಗ: ಗ್ರಾಹಕರ ಮನೆ ಬಾಗಿಲಿಗೆ ಎಟಿಎಂ ಸೇವೆ

- Advertisement -G L Acharya panikkar
- Advertisement -

ಸ್ಟೇಟ್ ಬ್ಯಾಂಕ್ ಇಂಡಿಯಾ ತನ್ನ ಗ್ರಾಹಕರಿಗೆ ಹೊಸ ಸೇವೆಯೊಂದನ್ನು ಪರಿಚಯಿಸಿದೆ. ಅದುವೆ ಮನೆಗೆ ಬಾಗಿಲಿಗೆ ಎಟಿಎಂ ಸೇವೆ. ನೀವು ಮಾಡಬೇಕಾಗಿರುವುದು ಕೇವಲ ವಾಟ್ಸ್ಆ್ಯಪ್ ಸಂದೇಶವನ್ನು ಕಳುಹಿಸುವುದು ಅಥವಾ ಎಸ್ಬಿಐಗೆ ಕರೆ ಮಾಡುವುದು. ಇಷ್ಟು ಮಾಡಿದ್ರೆ ಸಾಕು ಮೊಬೈಲ್ ಎಟಿಎಂ ನಿಮ್ಮ ಮನೆಗೆ ಬಾಗಿಲಿಗೆ ಬಂದು ತಲುಪುತ್ತದೆ.

ಲಕ್ನೋದಲ್ಲಿ ಸೇವೆ ಶುರು:

ಕೊರೊನಾ ವೈರಸ್ ನಿಂದಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತನ್ನ ಗ್ರಾಹಕರಿಗೆ ಗ್ರಾಹಕರಿಗೆ ಈ ವಿನೂತನ ಸೇವೆ ಒದಗಿಸಲು ಶುರು ಮಾಡಿದೆ. ಲಕ್ನೋದಲ್ಲಿ ಎಸ್ ಬಿ ಐ ಪ್ರಸ್ತುತ ಮನೆಗೆ ಬಾಗಿಲಿಗೆ ಎಟಿಎಂ ಸೇವೆಯನ್ನು ಪರಿಚಯಿಸಿದೆ. ಈ ಬಗ್ಗೆ ಲಕ್ನೋ ಸರ್ಕಲ್ ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಅಜಯ್ ಕುಮಾರ್ ಖನ್ನಾ ಮಾಹಿತಿ ನೀಡಿದ್ರು.

ಸ್ವಾತಂತ್ರ್ಯ ದಿನಾಚರಣೆ ಯಂದು ಅಧಿಕೃತವಾಗಿ ಎಸ್ ಬಿಐ ಮೊಬೈಲ್ ಎಟಿಎಂ ಸೌಲಭ್ಯವನ್ನು ಪರಿಚಯಿಸಿದೆ. ನಮಗೆ ತಿಳಿಸಲು ಡಯಲ್ ಮಾಡಿ ಅಥವಾ ವಾಟ್ಸಾಪ್ ಮಾಡಿ ಮತ್ತು ಉಳಿದದ್ದನ್ನು ನಾವು ಮಾಡುತ್ತೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

SBI ಎಟಿಎಂ ಹೊಸ ನಿಯಮಗಳು:

ಎಸ್ ಬಿಐ ತನ್ನ ಎಟಿಎಂ ವಾಪಸಾತಿ ನಿಯಮಗಳನ್ನು ಜುಲೈ 1 ರಿಂದ ಜಾರಿಗೆ ತರಲಾಗಿದೆ. ಎಸ್ ಬಿಐನ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಬ್ಯಾಂಕ್ ತನ್ನ ನಿಯಮಿತ ಉಳಿತಾಯ ಖಾತೆದಾರರಿಗೆ ಒಂದು ತಿಂಗಳಲ್ಲಿ, 8 ಉಚಿತ ವಹಿವಾಟುಗಳನ್ನು ಮೆಟ್ರೊ ನಗರಗಳಲ್ಲಿ ವಹಿವಾಟು ನಡೆಸಲು ಅನುಮತಿಸುತ್ತದೆ. ಇವುಗಳಲ್ಲಿ 5 ಎಸ್ ಬಿಐ ಎಟಿಎಂ ಮತ್ತು ಯಾವುದೇ ಬ್ಯಾಂಕಿನ 3 ಎಟಿಎಂಗಳಿಂದ ಉಚಿತ ವಹಿವಾಟು ಸೇರಿವೆ. ಮೆಟ್ರೋ ನಗರಗಳಲ್ಲದ ಕಡೆಗಳಲ್ಲಿ 10 ಉಚಿತ ಎಟಿಎಂ ವಹಿವಾಟುಗಳನ್ನು ಪಡೆಯಲು ಅವಕಾಶವಿದೆ. ಇದರಲ್ಲಿ 5 ವಹಿವಾಟುಗಳನ್ನು ಎಸ್ ಬಿಐನಿಂದ ಮಾಡಬಹುದಾಗಿದ್ದು, 5 ಇತರ ಬ್ಯಾಂಕುಗಳ ಎಟಿಎಂನಿಂದ ಸೇವೆ ಪಡೆಯಬಹುದಾಗಿದೆ.

- Advertisement -

Related news

error: Content is protected !!