- Advertisement -
- Advertisement -





ಕಳೆದ ಕೆಲವು ದಿನಗಳ ಹಿಂದೆ ದೊಡ್ಡಣ್ಣ ನಿಧನರಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ಸುದ್ದಿ ರಾಜ್ಯ ಮಟ್ಟದಲ್ಲಿ ವೈರಲ್ ಆಗಿತ್ತು. ಅನೇಕರು ದೊಡ್ಡಣ್ಣ ಅವರಿಗೆ ಕಾಲ್ ಮಾಡಿ ವಿಚಾರಿಸಿದ್ದರು. ಇದೀಗ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳ ವಿರುದ್ಧ ನಟ ದೂರು ನೀಡಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸಿದ ದಿನವೇ ವಿಡಿಯೋ ಮಾಡಿ ತಾವು ಆರೋಗ್ಯದಿಂದ ಇರುವುದಾಗಿ ದೊಡ್ಡಣ್ಣ ತಿಳಿಸಿದ್ದರ ಜೊತೆಗೆ ಈ ರೀತಿ ಸುಳ್ಳು ಸುದ್ದಿ ಮಾಡಿದವರ ವಿರುದ್ಧ ದೂರು ನೀಡುವುದಾಗಿ ತಿಳಿಸಿದ್ದರು. ಇದೀಗ ದೊಡ್ಡಣ್ಣ ದೂರು ನೀಡಿದ್ದು, ಮುಖೇಡಿಗಳ ಹೆಡೆಮುರಿ ಕಟ್ಟಿ ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿ ಅಂತ ಗುಡುಗಿದ್ದಾರೆ.
ಈ ಪ್ರಕರಣವನ್ನು ಸೈಬರ್ ಠಾಣೆ ಪೊಲೀಸರು ಗಂಭೀರವಾಗಿ ತಗೆದುಕೊಂಡಿದ್ದು, ಸುಳ್ಳು ಸುದ್ದಿ ಹಬ್ಬಿಸಿದ್ದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಈಗಾಗಲೇ ಅವರನ್ನು ಬಂಧಿಸಲು ಬಲೆ ಬೀಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
- Advertisement -








