Saturday, April 27, 2024
spot_imgspot_img
spot_imgspot_img

ಎಸ್.ಡಿ.ಪಿ.ಐ ಕಚೇರಿಯಲ್ಲಿ ಮಾರಕಾಸ್ತ್ರಗಳು ಪತ್ತೆ” ಎಂಬ ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳ ಮೇಲೆ ಕೇಸು ದಾಖಲಿಸಲು ತೀರ್ಮಾನಿಸಿದ ಎಸ್.ಡಿ.ಪಿ.ಐ

- Advertisement -G L Acharya panikkar
- Advertisement -

ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆಯ ಭಾಗವಾಗಿ ಎಸ್.ಡಿ.ಪಿ.ಐ ಕಚೇರಿಗಳ ಪರಿಶೋಧನೆ ನಡೆಸಿರುವುದನ್ನು ಕೆಲವು ಮಾಧ್ಯಮಗಳು “ಎಸ್.ಡಿ.ಪಿ.ಐ ಕಚೇರಿ ಮೇಲೆ ದಾಳಿ, ಮಾರಕಾಸ್ತ್ರಗಳು ಪತ್ತೆ” ಎಂಬ ಸುಳ್ಳು ವರದಿಯನ್ನು ಬಿತ್ತರಿಸಿದ್ದವು.

ಆದರೆ ಕಚೇರಿಯಲ್ಲಿ ಅಂತಹ ಯಾವುದೇ ವಸ್ತುಗಳು ಪತ್ತೆಯಾಗಿರುವುದಿಲ್ಲ ಹಾಗೂ ಪೋಲೀಸರು ನೀಡಿರುವ ಮಹಜರು ಮತ್ತು ಪರಿಶೋಧನೆಯ ಕೂಡ ಮಾರಕಾಸ್ತ್ರಗಳ ಉಲ್ಲೇಖವು ಕಂಡು ಬರುವುದಿಲ್ಲ. ಎಸ್ಡಿಪಿಐ ಪಕ್ಷದ ವಿರುದ್ಧ ಅಪಪ್ರಚಾರ ನಡೆಸಲು ಹಾತೊರೆಯುತ್ತಿರುವ ಕೆಲವು ಮಾಧ್ಯಮಗಳು ನಿರಂತರವಾಗಿ ಪಕ್ಷವನ್ನು ಗುರಿಯಾಗಿಸಿಕೊಂಡು ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನವನ್ನು ಮಾಡುತ್ತಿವೆ.

ಕೆಲ ರಾಜಕೀಯ ಪಕ್ಷಗಳ ಒತ್ತಾಸೆ ಮತ್ತು ನಿರ್ದಿಷ್ಟ ಪೂರ್ವಾಗ್ರಹಗಳಿಂದ ಎಸ್ಡಿಪಿಐಯನ್ನು ಗುರಿಪಡಿಸಿ ಸಮಾಜದ ದಾರಿ ತಪ್ಪಿಸಲು ಅವುಗಳು ಮಗ್ನವಾಗಿವೆ. ಇದೀಗ ಇಂತಹ ಮಾಧ್ಯಮಗಳ ಮೇಲೆ ಕೇಸು ದಾಖಲಿಸಿ ಕಾನೂನು ಹೋರಾಟವನ್ನು ನಡೆಸಲು ಎಸ್ಡಿಪಿಐ ಪಕ್ಷವು ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ರಾಜ್ಯಾಧ್ಯಕ್ಷರಾದ ಇಲ್ಯಾಸ್ ಮುಹಮ್ಮದ್ ತುಂಬೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!