Friday, March 31, 2023
spot_imgspot_img
spot_imgspot_img

ಬೆಂಗಳೂರು ಗಲಭೆಗೆ ಸ್ಥಳೀಯ ಪೊಲೀಸರ ನಿರ್ಲಕ್ಷ್ಯವೇ ಕಾರಣ-SDPI ರಾಜ್ಯಾಧ್ಯಕ್ಷ ಮೊಹಮ್ಮದ್ ಇಲ್ಯಾಸ್

- Advertisement -G L Acharya G L Acharya
- Advertisement -

ಮಂಗಳೂರು :-ಬೆಂಗಳೂರು ಗಲಭೆ ಹಿನ್ನೆಲೆಯಲ್ಲಿ ಗಲಭೆಗೆ ಸ್ಥಳೀಯ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು
SDPI ರಾಜ್ಯಾಧ್ಯಕ್ಷ  ಮೊಹಮ್ಮದ್ ಇಲ್ಯಾಸ್ ತುಂಬೆ ಹೇಳಿಕೆ ನೀಡಿದ್ದಾರೆ.

ನವೀನ್ ಎಂಬಾತ ಪ್ರವಾದಿ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಅವಹೇಳನ ಮಾಡಿದ್ದ, ಈ ಬಗ್ಗೆ ಸ್ಥಳೀಯ ಯುವಕರು ಪೊಲೀಸ್ ಠಾಣೆಗೆ ದೂರು ಕೊಟ್ರೂ ಪೊಲೀಸರ ನಿರ್ಲಕ್ಷ್ಯ ದಿಂದ ಘಟನೆ ನಡೆದಿದೆ. ನವೀನ್, ಶಾಸಕ ಅಖಂಡ ಶ್ರೀನಿವಾಸ್ ರ ಸೋದರ ಅಳಿಯನಾಗಿರೋದ್ರಿಂದ ಕ್ರಮ ಕೈಗೊಂಡಿಲ್ಲ ದಿರುವುದರಿಂದ  ಮೊದಲೇ ಆಕ್ರೋಷದಿಂದ ಇದ್ದ ಜನ ಪೊಲೀಸರ ನಿರ್ಲಕ್ಷ್ಯದಿಂದ ರೊಚ್ಚಿಗೆದ್ದಿದ್ದಾರೆ.
ಈ ಅಹಿತಕರ ಘಟನೆಗೆ ಹಾಗೂ ಮೂರು ಜೀವ ಬಲಿಯಾಗಲು ಪೊಲೀಸರ ನಿರ್ಲಕ್ಷ್ಯ ಕಾರಣ ಹಾಗೂ
ನವೀನ್ ಎಂಬಾತನ ಕೋಮು ಪ್ರಚೋದನಾ ಪೋಸ್ಟ್ ಘಟನೆಗೆ ಕಾರಣ ಎಂದಿದ್ದಾರೆ.

SDPI ಮುಖಂಡರು ಪೊಲೀಸರ ಜೊತೆ ಸೇರಿ ಜನರನ್ನು ಸಮಾಧಾನಪಡಿಸಿದ್ದಾರೆ. ಗಲಭೆ ನಿಯಂತ್ರಿಸಲು ಬಂದ ಮುಝಮಿಲ್ ಪಾಷರನ್ನು ಬಂಧಿಸಿದ್ದಾರೆ. ಇದು ಪೊಲೀಸರ ಹಾಗೂ ಸರ್ಕಾರದ ವೈಫಲ್ಯವನ್ನು ಮರೆಮಾಚಲು ಯತ್ನ.ಮತ್ತು ಮಾಮೂಲಿಯಂತೆ SDPIಯನ್ನು ಗಲಭೆಗೆ ಎಳೆದು ತರುವ ಪ್ರಯತ್ನ ನಡೆದಿದೆ. ಜನರು ಯಾರೂ ಅಪಪ್ರಚಾರವನ್ನು ಗಣನೆಗೆ ತೆಗೆಯಬಾರದು ,SDPI ಯಾವುತ್ತೂ ನ್ಯಾಯ,ನೀತಿ,ಅಭಿವೃದ್ಧಿ ಪರ ಇರುತ್ತದೆ‌ ಎಂದು
SDPI ರಾಜ್ಯಾಧ್ಯಕ್ಷ  ಮೊಹಮ್ಮದ್ ಇಲ್ಯಾಸ್ ತುಂಬೆ ಹೇಳಿಕೆ ನೀಡಿದ್ದಾರೆ.

- Advertisement -

Related news

error: Content is protected !!