Thursday, May 9, 2024
spot_imgspot_img
spot_imgspot_img

ವೀರಕಂಭ: ವೀರಕಂಭ ಗ್ರಾಮ ಪಂಚಾಯತಿನ 2023-24 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆ

- Advertisement -G L Acharya panikkar
- Advertisement -

ವೀರಕಂಭ: ಬಂಟ್ವಾಳ ತಾಲೂಕು ವೀರಕಂಭ ಗ್ರಾಮ ಪಂಚಾಯತಿನ 2023-24 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆ ದ ಕ ಜಿ ಪಂ ಹಿ ಪ್ರಾ ಶಾಲೆ ಮಜಿ, ವೀರಕಂಭ ಇಲ್ಲಿ ಗ್ರಾಮಾ ಪಂಚಾಯತ್ ಅಧ್ಯಕ್ಷರಾದ ಲಲಿತಾ ರವರ ಅಧ್ಯಕ್ಷ ತೆಯಲ್ಲಿ ನಡಯಿತು.

ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್ ಜಿ ಭಾಗವಹಿಸಿ ಗ್ರಾಮ ಸಭೆಯನ್ನು ಯಶಸ್ವಿಯಾಗಿ ನಡೆಸಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫನತ್ಯಾಜ್ಯ ಫಟಕ ನಿರ್ಮಾಣ ವಾಗದ ಬಗ್ಗೆ ಹಾಗೂ ಫನತ್ಯಾಜ್ಯ ವಿಲೇವಾರಿ ಸೂಕ್ತ ರೀತಿಯಲ್ಲಿ ಆಗದಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡುವಂತೆ ಗ್ರಾಮಸ್ಥರು ಪ್ರಶ್ನಿಸಿದರು, ಹಾಗೂ ಮಂಗಳಪದವು ಪ್ರದೇಶದಲ್ಲಿ ಅನಾಧಿಕೃತ ಕಟ್ಟಡ ತೆರವ್ ಗೊಳಿಸದಿರುದರ ಬಗ್ಗೆ, ವಿವಿಧ ಜಂಕ್ಷನ್ ಗಳಲ್ಲಿ ಅಳವಡಿಸಿದ ಸೋಲಾರ್ ದೀಪ ರಿಪೇರಿ ಮಾಡದಿರುವುದರ ಬಗ್ಗೆ ಪ್ರಶ್ನಿಸಿದರು,.

ವಿವಿಧ ಇಲಾಖೆಗಳಾದ ಅರೋಗ್ಯಇಲಾಖೆ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ,ಕೃಷಿ ಇಲಾಖೆ, ಮೆಸ್ಕಾಂ ಇಲಾಖೆ,ತೋಟಗಾರಿಕೆ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಉದ್ಯೋಗ ಖಾತರಿ ಇಲಾಖೆ,ಪೊಲೀಸ್ ಇಲಾಖೆ,ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಗ್ರಾ ಪಂ ಸದಸ್ಯರುಗಳಾದ ರಘು ಪೂಜಾರಿ,ದಿನೇಶ್ ಪೂಜಾರಿ, ನಿಶಾಂತ್ ರೈ, ಸಂದೀಪ್, ಜಯಪ್ರಸಾದ್, ಅಬ್ದುಲ್ ರಹಿಮಾನ್, ಜಯಂತಿ, ಮೀನಾಕ್ಷಿ, ಗೀತಾ ಜೆ ಗಾಂಭೀರ್, ಉಮಾವತಿ,ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗರಿಕರು, ಅರೋಗ್ಯ ಸುರಕ್ಷಾಣಾಧಿಕಾರಿಗಳು ,ಗ್ರಾಮ ಸಮುದಾಯ ಅರೋಗ್ಯ ಅಧಿಕಾರಿ,ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕಿಯರು,ಸ್ನೇಹ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಗ್ರಾ ಪಂ ಸಿಬ್ಬಂದಿ ಗಳು ಹಾಜರಿದ್ದರು. ಮಜಿ ಶಾಲಾ ಮಕ್ಕಳು ನಾಡಗೀತೆ ಹಾಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಷ್ಪ ಎಂ ಸ್ವಾಗತಿಸಿ, ಕಾರ್ಯದರ್ಶಿ ಸವಿತಾ ವಾರ್ಷಿಕ ವರದಿ ವಾಚಿಸಿ, ವಂದಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

- Advertisement -

Related news

error: Content is protected !!