Thursday, June 18, 2026
spot_imgspot_img
spot_imgspot_img

ಡ್ರಗ್ಸ್ ಮಾರಾಟ; ನೈಜಿರಿಯಾ ಮೂಲದ ಪ್ರಜೆ ಅರೆಸ್ಟ್‌..!

- Advertisement -
- Advertisement -

ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜಿರಿಯಾ ಮೂಲದ ಪ್ರಜೆಯನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ಡೇನಿಯಲ್‌ ಬಂಧಿತ ಆರೋಪಿ. ಡೇನಿಯಲ್ ಗ್ರಾಹಕರನ್ನು ವಾಟ್ಸ್ ಆಪ್ ಮೂಲಕ ಸಂಪರ್ಕಿಸಿ ಹಣ ಪಡೆದು ನಿರ್ಧಿಷ್ಟ ಸ್ಥಳದಲ್ಲಿ ಡ್ರಗ್ಸ್ ಇಟ್ಟು ಪರಾರಿಯಾಗುತ್ತಿದ್ದ. ಬಳಿಕ ಅವನಿಗೆ ಹಣ ನೀಡಿರುವ ಗ್ರಾಹಕರು ಅಲ್ಲಿಗೆ ಬಂದು ಡ್ರಗ್ಸ್ ತೆಗೆದುಕೊಂಡು ಹೋಗುತ್ತಿದ್ದರು.

ಒಟ್ಟು ಐದು ಬ್ಯಾಂಕ್ ಅಕೌಂಟ್‌ಗಳನ್ನು ಹೊಂದಿದ್ದ ಡೇನಿಯಲ್ ಪದೇಪದೆ ತನ್ನ ಖಾತೆಯಿಂದ ಹಣ ವಿತ್‌ ಡ್ರಾ ಮಾಡುತ್ತಿದ್ದ. ಕಳೆದ ಮೂರು ತಿಂಗಳಲ್ಲಿ ಈತನ ಖಾತೆಗೆ 25 ಲಕ್ಷ ರೂ. ವರ್ಗಾವಣೆ ಆಗಿತ್ತು. ಸದ್ಯ ಪೊಲೀಸರ ವಶದಲ್ಲಿರುವ ಡೇನಿಯಲ್‌ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಕರಣದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!