- Advertisement -
- Advertisement -





ವಿಟ್ಲದ ಹಿರಿಯ ಜ್ಯೋತಿಷಿ ಕುಳಮರ್ವ ಸುಬ್ರಹ್ಮಣ್ಯ ಭಟ್ (80) ವಿಟ್ಲದ ಬಸವನಗುಡಿ ಜಯದುರ್ಗ ನಿವಾಸದಲ್ಲಿ ನಿಧನರಾದರು.
ಹಲವು ವರ್ಷಗಳ ಕಾಲ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮುಂಭಾಗದ ಕಟ್ಟಡದಲ್ಲಿ ಜ್ಯೋತಿಷ್ಯ ಕಾರ್ಯ ನಡೆಸುತ್ತಿದ್ದ ಇವರು ಬಸವನಗುಡಿಯಲ್ಲಿರುವ ತನ್ನ ಸ್ವಗೃಹ ಜಯದುರ್ಗ ನಿವಾಸದಲ್ಲಿ ಜ್ಯೋತಿಷ್ಯ ಕಾರ್ಯ ನಡೆಸುತ್ತಿದ್ದರು.
ವಯೋಸಹಜ ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.
- Advertisement -








