Thursday, July 23, 2026
spot_imgspot_img
spot_imgspot_img

(ಸೆ.11) ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ ನಿಯಮಿತ 2024-25ನೇ ಸಾಲಿನ ವಾರ್ಷಿಕ ಮಹಾಸಭೆ

- Advertisement -
- Advertisement -

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ ನಿಯಮಿತ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು 11-9-2025ನೇ ಗುರುವಾರದಂದು ಪೂರ್ವಾಹ್ನ 11:00ಕ್ಕೆ ವಿಟ್ಲದ ಶಾಂತಿನಗರದಲ್ಲಿರುವ “ಅಕ್ಷಯಯ ಸಮುದಾಯ ಭವನ”ದಲ್ಲಿ ಬ್ಯಾಂಕ್‌ನ ಅಧ್ಯಕ್ಷ ಹೆಚ್‌. ಜಗನ್ನಾಥ ಸಾಲಿಯಾನ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ವಾರ್ಷಿಕ ಮಹಾಸಭೆಯುಲ್ಲಿ ಮಹಾಸಭೆಯ ನೋಟೀಸನ್ನು ಓದಿ ದಾಖಲಿಸುವುದು, ಕಳೆದ ವರ್ಷದ ಮಹಾಸಭೆಯ ನಡವಳಿಕೆಗಳನ್ನು ಓದಿ ದಾಖಲಿಸುವುದು, 2024-25ನೇ ವರ್ಷದ ಆಡಳಿತ ಮಂಡಳಿ ವರದಿ ಮಂಜೂರಾತಿ, 2024-25ನೇ ವರ್ಷದ ಲೆಕ್ಕ ಪರಿಶೋಧನಾ ವರದಿ ಮಂಜೂರಾತಿ, 2024-25ನೇ ವರ್ಷದ ನಿವ್ವಳ ಲಾಭ ವಿಂಗಡಿಸುವುದು, 2024-25ನೇ ವರ್ಷದಲ್ಲಿ ಬಜೆಟ್‌ ಮೀರಿ ಖರ್ಚಾದ ವೆಚ್ಚಗಳ ಮಂಜೂರಾತಿ, 2024-25ನೇ ವರ್ಷದ ಅಂದಾಜು ಮುಂಗಡ ಪತ್ರಗಳ ಮಂಜೂರಾತಿ, 2024-25ನೇ ಸಾಲಿಗೆ ಬ್ಯಾಂಕ್‌ನ ಲೆಕ್ಕ ಪರಿಶೋಧನೆಗೆ ಲೆಕ್ಕ ಪರಿಶೋಧಕರನ್ನು ನೇಮಿಸುವ ಕುರಿತು ಮುಂತಾದ ವಿಚಾರಗಳ ಬಗ್ಗೆ ಸಭೆ ನಡೆಯಲಿದೆ.

- Advertisement -

Related news

error: Content is protected !!