Sunday, April 28, 2024
spot_imgspot_img
spot_imgspot_img

ವೀರಕಂಬ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಇದರ ವಾರ್ಷಿಕ ಸಾಮಾನ್ಯ ಸಭೆ

- Advertisement -G L Acharya panikkar
- Advertisement -

ಕಲ್ಲಡ್ಕ ನ(12): ವೀರಕಂಬ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಇದರ 2019 -20 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ವೀರಕಂಭ ಗ್ರಾಮ ಪಂಚಾಯತಿನ ರಾಜೀವ ಗಾಂಧಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಯುತ ದಿಲೀಪ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ 25 ಶೇಕಡಾ ಡಿವಿಡೆಂಟ್ ಘೋಷಿಸಲಾಯಿತು ಹಾಗೂ ಸಂಘಕ್ಕೆ ಹಾಲು ಪೂರೈಸುತ್ತಿರುವ ಸದಸ್ಯರಿಗೆ ಪ್ರೋತ್ಸಾಹದಾಯಕವಾಗಿ ಉಚಿತವಾಗಿ ಫೈಬರ್ ಬಕೆಟ್ ನೀಡಲಾಯಿತು .ಕಾರ್ಯಕ್ರಮದಲ್ಲಿ ಕೆಎಂಎಫ್ ವಿಸ್ತರಣಾಧಿಕಾರಿ ಶ್ರೀ ದೇವರಾಜ್ ರೈತರಿಗೆ ಹಾಲಿನ ಗುಣಮಟ್ಟ ಹಾಗೂ ಪಶು ಸಾಕಣೆ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರೆ ವಿಸ್ತರಣಾಧಿಕಾರಿ ಶ್ರೀಯುತ ಜಗದೀಶ್ ರೈತರಿಗೆ ಕೆ ಎಂ ಎಫ್ ಹಾಗೂ ಸರಕಾರದಿಂದ ರೈತರಿಗೆ ಹೈನುಗಾರಿಕೆಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಸಂಘದ ನಿರ್ದೇಶಕ ಅಶೋಕ್ ಕುಮಾರ್ ತೆಕ್ಕಿಪಾಪು, ಸ್ವಾಗತಿಸಿ ಸಂಘದ ವರದಿಯನ್ನು ಕಾರ್ಯದರ್ಶಿ ಹರೀಶ್ ಬಂಗೇರ ವಾಚಿಸಿದರು .ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ಜಗನ್ನಾಥ ಆಳ್ವ ಮೈರ ,ವೆಂಕಪ್ಪ ಪೂಜಾರಿ ಮೈರ ,ನಾರಾಯಣ ಮೂಲ್ಯ ಬೆತ್ತ ಸರವು ,ಪದ್ಮನಾಭ ಬಂಗೇರ ಮಜಿ, ಉಮೇಶ ಮಜಿ, ಪದ್ಮನಾಭ ಗೌಡ ಮೈರ, ಶ್ರೀಮತಿ ಜಯಂತಿ, ಉಪಸ್ಥಿತರಿದ್ದರು ನಿರ್ದೇಶಕ ಕೇಶವ ನಾಯ್ಕ ವಂದಿಸಿದರು.

- Advertisement -

Related news

error: Content is protected !!