Friday, May 17, 2024
spot_imgspot_img
spot_imgspot_img

ಅಮಿತ್ ಶಾ ರನ್ನು ಭೇಟಿಯಾದ ಅದಾರ್ ಪೂನಾವಾಲಾ; ಅಕ್ಟೋಬರ್​​ನಲ್ಲಿ ಕೊವೊವಾಕ್ಸ್ ಲಸಿಕೆ ಪ್ರಾರಂಭ ಸಾಧ್ಯತೆ

- Advertisement -G L Acharya panikkar
- Advertisement -

ನವದೆಹಲಿ: ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಅದಾರ್ ಪೂನಾವಾಲಾ ಅವರು ಶುಕ್ರವಾರ ತಮ್ಮ ಕಂಪನಿಯು ಭಾರತದಲ್ಲಿ ತಯಾರಿಸುತ್ತಿರುವ ಇನ್ನೊಂದು ಕೊವಿಡ್-19 ಲಸಿಕೆಯನ್ನು ಕೊವೊವಾಕ್ಸ್ 2022 ರ ಮೊದಲ ತ್ರೈಮಾಸಿಕದ ವೇಳೆಗೆ ವಯಸ್ಕರಿಗೆ ಮತ್ತು ಮಕ್ಕಳಿಗಾಗಿ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಸೆರಮ್ ಇನ್‌ಸ್ಟಿಟ್ಯೂಟ್‌ಗೆ ಒದಗಿಸಿದ ಎಲ್ಲಾ ಬೆಂಬಲಕ್ಕಾಗಿ ಅವರು ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಬೇಡಿಕೆಯನ್ನು ಪೂರೈಸಲು ಕಂಪನಿಯು ತನ್ನ ಕೊವಿಶೀಲ್ಡ್ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಯಾವಾಗಲೂ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಪೂನಾವಾಲಾ ಅವರು ಶುಕ್ರವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಸತ್ತಿನಲ್ಲಿ ಭೇಟಿಯಾದರು ಮತ್ತು ಇಬ್ಬರ ನಡುವಿನ ಸಭೆ 30 ನಿಮಿಷಗಳ ಕಾಲ ನಡೆಯಿತು. “ಸರ್ಕಾರವು ನಮಗೆ ಸಹಾಯ ಮಾಡುತ್ತಿದೆ ಮತ್ತು ನಾವು ಯಾವುದೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿಲ್ಲ. ಎಲ್ಲಾ ಸಹಕಾರ ಮತ್ತು ಬೆಂಬಲಕ್ಕಾಗಿ ನಾವು ಪ್ರಧಾನಿ ನರೇಂದ್ರ ಮೋದಿಗೆ ಕೃತಜ್ಞರಾಗಿರುತ್ತೇವೆ” ಎಂದು ಪೂನಾವಾಲಾ ತಮ್ಮ ಭೇಟಿಯ ನಂತರ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.

ಮಕ್ಕಳಿಗಾಗಿರುವ ಲಸಿಕೆಗಳ ಬಗ್ಗೆ ಕೇಳಿದಾಗ ಮಕ್ಕಳಿಗೆ ಕೊವೊವಾಕ್ಸ್ ಲಸಿಕೆಯನ್ನು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹೆಚ್ಚಾಗಿ ಜನವರಿ-ಫೆಬ್ರವರಿಯಲ್ಲಿ ಆರಂಭಿಸಲಾಗುವುದು ಎಂದಿದ್ದಾರೆ ಪೂನಾವಾಲಾ.

ಡಿಸಿಜಿಐ ಅನುಮೋದನೆಗಳನ್ನು ಅವಲಂಬಿಸಿ ವಯಸ್ಕರಿಗೆ ಕೊವೊವಾಕ್ಸ್ ಅನ್ನು ಅಕ್ಟೋಬರ್‌ನಲ್ಲಿ ಪ್ರಾರಂಭಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ. ಇದು ಎರಡು ಡೋಸ್ ಲಸಿಕೆಯಾಗಿದ್ದು, ಪ್ರಾರಂಭದ ಸಮಯದಲ್ಲಿ ಬೆಲೆಯನ್ನು ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.

Serum-Institute-of-india CEO-Adar-Poonawalla-met-Home-Minister-Amit Shah-Says-Covovax-Vaccine-Will-be-launched-in-October

- Advertisement -

Related news

error: Content is protected !!