Thursday, April 25, 2024
spot_imgspot_img
spot_imgspot_img

18,001 ತುಪ್ಪದ ತೆಂಗಿನಕಾಯಿಯನ್ನು ಶಬರಿಮಲೆ ಅಯ್ಯಪ್ಪಸ್ವಾಮಿಗೆ ಅರ್ಪಿಸಿದ ಭಕ್ತ

- Advertisement -G L Acharya panikkar
- Advertisement -
vtv vitla
vtv vitla

ತಿರುವನಂತಪುರಂ: ಅಯ್ಯಪ್ಪ ಸ್ವಾಮಿ ಭಕ್ತರೊಬ್ಬರು ಶಬರಿಮಲೆ ಅಯ್ಯಪ್ಪನಿಗೆ ಬರೋಬ್ಬರಿ 18,001 ತುಪ್ಪದ ತೆಂಗಿನ ಕಾಯಿ ಅರ್ಪಿಸಿ ದಾಖಲೆ ಬರೆದಿದ್ದಾರೆ.

vtv vitla

ಬೆಂಗಳೂರು ಮೂಲದ ಮಲಯಾಳಿ ಉದ್ಯಮಿಯೊಬ್ಬರ ಅಯ್ಯಪ್ಪ ಸ್ವಾಮಿಯ ಭಕ್ತರಾಗಿದ್ದು, ಸ್ವಾಮಿಗೆ 18,001 ತುಪ್ಪದ ತೆಂಗಿನಕಾಯಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಇದು, ಈವರೆಗೆ ನೀಡಿದ ಅಧಿಕ ಸಂಖ್ಯೆಯ ಕೊಡುಗೆಯಾಗಿದೆ.

ಇದಕ್ಕಾಗಿ ಅವರು ದೇವಸ್ಥಾನಕ್ಕೆ ₹ 18 ಲಕ್ಷ ಶುಲ್ಕ ಪಾವತಿಸಿದ್ದಾರೆ. ದೇವಸ್ಥಾನದ ಪ್ರಮುಖ ಹರಕೆಗಳಲ್ಲಿ ತುಪ್ಪದ ತೆಂಗಿನಕಾಯಿ ಒಂದು. ಇದಕ್ಕಾಗಿ, 2,280 ಕೆ.ಜಿ. ತುಪ್ಪ ಮತ್ತು 7.5 ಟನ್‌ ತೆಂಗಿನಕಾಯಿ ಬೇಕು. 10 ಮಂದಿ ಅರ್ಚಕರು ಎರಡು ದಿನದಲ್ಲಿ ತೆಂಗಿನಕಾಯಿಗಳಿಗೆ ತುಪ್ಪ ತುಂಬಿದ್ದು, ಟ್ರ್ಯಾಕ್ಟರ್‌ನಲ್ಲಿ ದೇಗುಲಕ್ಕೆ ಸಾಗಿಸಲಾಗಿದೆ. ಕೊಡುಗೆ ನೀಡಿದ ಸಂದರ್ಭದಲ್ಲಿ ಭಕ್ತರು ಹಾಜರಿರಲಿಲ್ಲ. ಆದರೆ, ಅವರ ಸಂಬಂಧಿಕರು ಮತ್ತು ಗೆಳೆಯರು ಹಾಜರಿದ್ದರು.

vtv vitla
vtv vitla
- Advertisement -

Related news

error: Content is protected !!