- Advertisement -
- Advertisement -



ವಿಟ್ಲ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿಣಿ (ರಿ) ವಿಟ್ಲ ಘಟಕದ ಆಶ್ರಯದಲ್ಲಿ, ಬಿಲ್ಲವ ಸಂಘ (ರಿ) ವಿಟ್ಲ, ಬಿಲ್ಲವ ಮಹಿಳಾ ಘಟಕ ಕುಂಡಡ್ಕ ಬೆಳ್ಳಿಹಬ್ಬ ಸಮಿತಿ ಹಾಗೂ ಆರ್.ಕೆ. ಸಮೂಹ ಸಂಸ್ಥೆಗಳು ಸಹಯೋಗದಲ್ಲಿ ಆಗಸ್ಟ್. 9ರಂದು ವಿಟ್ಲದ ಅರಮನೆ ಗದ್ದೆ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪ ನಡೆಯಲಿರುವ ಸಾರ್ವಜನಿಕ ಕೆಸರ್ ಡೊಂಜಿ ದಿನ–2026 ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಕೃಷ್ಣಯ್ಯ ವಿಟ್ಲ ಅರಮನೆ, ಯುವವಾಹಿಣಿ ಅಧ್ಯಕ್ಷ ಕೆ.ಟಿ. ಆನಂದ್, ಬಿಲ್ಲವ ಸಂಘ (ರಿ) ವಿಟ್ಲದ ಅಧ್ಯಕ್ಷ ಜಯಪ್ರಕಾಶ್ ಪಾಣೆಮಜಲು, ಬಿಲ್ಲವ ಸಂಘದ ಗೌರವಾಧ್ಯಕ್ಷ ಎಂ.ಎಸ್. ಸಂಜೀವ ಗಜಾನನ, ಯುವವಾಹಿಣಿಯ ಉಪಾಧ್ಯಕ್ಷ ಕೇಶವ, ಬಿಲ್ಲವ ಸಂಘದ ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ಯುವವಾಹಿಣಿಯ ಕಾರ್ಯದರ್ಶಿ ಧನಲಕ್ಷ್ಮೀ, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಹಾಸ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
- Advertisement -








