Tuesday, May 21, 2024
spot_imgspot_img
spot_imgspot_img

ಈ ದೇಶದಲ್ಲಿ ಮಿಲನ ಕ್ರಿಯೆಯೂ ಒಂದು ಸ್ಪರ್ಧೆ ಅಂದ್ರೆ ನಂಬ್ತೀರಾ..? ಚಾಪಿಂಯನ್ ಶಿಪ್‌ ಪಟ್ಟ ಏರಲು ಒಂದು ಗಂಟೆ ಪರ್ಫಾರ್ಮೆನ್ಸ್ ಕಡ್ಡಾಯ

- Advertisement -G L Acharya panikkar
- Advertisement -

ಲೈಂಗಿಕ ವಿಚಾರಗಳ ಬಗ್ಗೆ ಓಪನ್ ಆಗಿ ಮಾತನಾಡಲು ಅನೇಕ ದೇಶದ ಜನರು ಹಿಂದೇಟು ಹಾಕುತ್ತಾರೆ. ಕೆಲವರು ಈ ಶಬ್ದ ಕೇಳಿದರೆ ಸಾಕು ನಾಚಿಕೆ ಮಾಡಿಕೊಂಡು ಮಾರು ದೂರ ಹೋಗಿ ನಿಲ್ಲುತ್ತಾರೆ.

ಆದರೆ ಇಲ್ಲೊಂದು ದೇಶ ಸೆಕ್ಸ್​ ಚಾಂಪಿಯನ್​ಶಿಪ್ ಸ್ಫರ್ಧೆ ಏರ್ಪಡಿಸಿಬಿಟ್ಟಿದೆ ಎಂಬ ಸುದ್ದಿ ಬಿಸಿಬಿಸಿಯಾಗಿ ಚರ್ಚೆಯಾಗುತ್ತಿದೆ. ಹೀಗೊಂದು ಸಾಹಸಕ್ಕೆ ಸ್ವೀಡನ್ ದೇಶ ಮುಂದಾಗಿದೆ. ಜೂನ್ 8ರಿಂದ ಈ ಸ್ಪರ್ಧೆ ಆರಂಭ ಆಗಲಿದೆ. ಈ ವಿಚಾರಕ್ಕೆ ಸಂಬಂಧಿಸಿ ‘ಈ ಚಾಂಪಿಯನ್​ಶಿಪ್ ಯಾವ ವಾಹಿನಿಯಲ್ಲಿ ಲೈವ್ ಬರಲಿದೆ’ ಎಂದು ಚರ್ಚೆಗಳು ನಡೆಯುತ್ತಿವೆ.

ಸ್ವೀಡನ್ ಸೆಕ್ಸ್​ನ ಸ್ಪೋರ್ಟ್ಸ್ ಎಂದು ಪರಿಗಣಿಸಿದೆ. ಈ ಕಾರಣದಿಂದಲೇ ಚಾಂಪಿಯನ್​ಶಿಪ್​ ಏರ್ಪಡಿಸಲಾಗುತ್ತಿದೆ. ಸ್ವೀಡನ್ ಸೆಕ್ಸ್ ಫೆಡರೇಷನ್ ವತಿಯಿಂದ ಈ ಸ್ಪರ್ಧೆ ಆಯೋಜನೆಗೊಂಡಿದೆ. ಜೂನ್ 8ರಿಂದ ಹಲವು ವಾರಗಳ ಕಾಲ ಈ ಸ್ಪರ್ಧೆ ನಡೆಯಲಿದೆ. ಸ್ಪರ್ಧಿಗಳಿಗೆ ಅನೇಕ ನಿಯಮಗಳನ್ನು ಕೂಡ ಹಾಕಲಾಗಿದೆ.

ಈ ಸ್ಪೋರ್ಟ್ಸ್​ನಲ್ಲಿ ಭಾಗವಹಿಸಬೇಕು ಎಂದರೆ ಸಾಕಷ್ಟು ಸ್ಟೆಮಿನಾ ಬೇಕು. ಏಕೆಂದರೆ ನಿತ್ಯ ಆರು ಗಂಟೆ ಮ್ಯಾಚ್ ನಡೆಯುತ್ತದೆ. ಸ್ಪರ್ಧಿ 45 ನಿಮಿಷದಿಂದ 60 ನಿಮಿಷದವರೆಗೆ ಈ ಚಟುವಟಿಕೆಯಲ್ಲಿ ಭಾಗಿ ಆಗಬಹುದು.

ಈ ಚಾಂಪಿನ್​ಶಿಪ್​ಗೆ ಈಗಾಗಲೇ ಬೇಡಿಕೆ ಸೃಷ್ಟಿ ಆಗಿದೆ. ಬೇರೆ ಬೇರೆ ದೇಶಗಳ 20 ಸ್ಪರ್ಧಿಗಳು ಹೆಸರು ನೋಂದಣಿ ಮಾಡಿಸಿದ್ದಾರೆ. ಈ ಸುದ್ದಿ ಈಗ ತಾನೇ ವೈರಲ್ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನರು ಹೆಸರು ನೋಂದಣಿ ಮಾಡಿಸುವ ಸಾಧ್ಯತೆ ಇದೆ.

ಇತರೆ ಆಟಗಳಂತೆ ಸೆಕ್ಸ್ ಚಾಂಪಿಯನ್​ಶಿಪ್ ನಡೆಸಲಾಗುತ್ತಿದೆ. ಮೂರು ಜ್ಯೂರಿಗಳು ಇರಲಿದ್ದಾರೆ. ಕೇವಲ ಜ್ಯೂರಿಗಳ ನಿರ್ಧಾರವೇ ಅಂತಿಮ ಅಲ್ಲ. ಪ್ರೇಕ್ಷಕರ ಮತಗಳನ್ನು ಕೂಡ ಇಲ್ಲಿ ಪರಿಗಣಿಸಲಾಗುತ್ತದೆ. ಪ್ರತಿ ಸ್ಪರ್ಧಿ ಮುಂದಿನ ಹಂತಕ್ಕೆ ಹೋಗಬೇಕು ಎಂದರೆ ಕನಿಷ್ಠ ಇಷ್ಟು ಸ್ಕೋರ್ ಮಾಡಬೇಕು ಎನ್ನುವ ನಿಯಮ ಇರಲಿದೆ. ಸ್ಪರ್ಧಿಗೆ ಐದು ಹಾಗೂ 10 ಅಂಕ ನೀಡಲಾಗುತ್ತದೆ.

ಈಜು ಸ್ಪರ್ಧೆಯಲ್ಲಿ ನಾನಾ ರೀತಿಯ ಸುತ್ತುಗಳಿರುತ್ತವೆ. ಸೆಕ್ಸ್ ಚಾಂಪಿಯನ್ ಕೂಡ ಇದೇ ರೀತಿಯಲ್ಲಿ ಇರಲಿದೆ. 16 ಹಂತಗಳಲ್ಲಿ ಸ್ಪರ್ಧೆ ನಡೆಯಲಿದೆ.

ಈ ಬಗ್ಗೆ ಆಯೋಜನಾ ಸಮಿತಿ ಹೇಳಿಕೆ ನೀಡಿದೆ. ‘ಈ ಚಾಂಪಿಯನ್​ಶಿಪ್​ನಲ್ಲಿ ಭಾಗಿ ಆಗುವವರಿಗೆ ಸೃಜನಶೀಲತೆ, ಬುದ್ಧಿವಂತಿಕೆ, ಕಲ್ಪನೆ, ದೈಹಿಕ ಸಾಮರ್ಥ್ಯ, ಸಹಿಷ್ಣುತೆಯ ಅಗತ್ಯವಿರುತ್ತದೆ. ಅಗತ್ಯ ಬಿದ್ದಾಗ ನಿಯಮಗಳನ್ನು ಬದಲಿಸಿಕೊಂಡು ಮುಂದೆ ಸಾಗುತ್ತೇವೆ’ ಎಂದು ​ ಫೆಡರೇಷನ್ ತಿಳಿಸಿದೆ.

ಈ ಸ್ಪರ್ಧೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

- Advertisement -

Related news

error: Content is protected !!