Thursday, May 2, 2024
spot_imgspot_img
spot_imgspot_img

ಒಂಟಿ ಮಹಿಳೆಯರಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ..!

- Advertisement -G L Acharya panikkar
- Advertisement -

ಬೈಕ್‌ನಲ್ಲಿ ಬಂದು ರಸ್ತೆಯಲ್ಲಿ ಹೋಗುತ್ತಿದ್ದ ಒಂಟಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಮಂಡ್ಯ ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನ್ನು ಕೆರಗೋಡು ಗ್ರಾಮದ ಚಂದ್ರಶೇಖರ್ ಆರಾಧ್ಯ (35) ಎಂದು ಗುರುತಿಸಲಾಗಿದೆ.

ಇತ ಹೆಲ್ಮೆಟ್ ಧರಿಸಿ ಬೈಕ್​ನಲ್ಲಿ ಬಂದು ರಸ್ತೆಯಲ್ಲಿ ಹೋಗ್ತಿದ್ದ ಒಂಟಿ ಮಹಿಳೆಯರಿಗೆ ಕಿರುಕುಳ‌ ಕೊಡುತ್ತಿದ್ದನು.ಕಳೆದ ಒಂದು ತಿಂಗಳಿಂದ ಹಲವೆಡೆ ವಿಕೃತವಾಗಿ ನಡೆದುಕೊಂಡಿದ್ದನು. ರಸ್ತೆಯಲ್ಲಿ ಒಂಟಿಯಾಗಿ ಹೋಗುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದಾನೆ. ಈ ವೇಳೆ ಆರೋಪಿಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರಿಂದ ಮಾಹಿತಿ ಪಡೆದ ಪೊಲೀಸರು ಸಿಸಿಕ್ಯಾಮರಾ ದೃಶ್ಯಾವಳಿ ಆಧರಿಸಿ ಚಂದ್ರಶೇಖರ್​ನನ್ನು ಬಂಧಿಸಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!