Saturday, June 6, 2026
spot_imgspot_img
spot_imgspot_img

ಸುಪಾರಿ ಕೊಟ್ಟು ರಂಗಭೂಮಿ ಕಲಾವಿದೆಯ ಮೇಲೆ ಆ್ಯಸಿಡ್ ದಾಳಿ; ಮೂವರು ಅಂದರ್

- Advertisement -
- Advertisement -

ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ ನಡೆದ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ನಂದಿನಿ ಲೇಔಟ್‍ನ ಗಣೇಶ್ ಬ್ಲಾಕ್ ನಿವಾಸಿ, ರಂಗಭೂಮಿ ಕಲಾವಿದೆ ದೇವಿ ಮನೆಯ ಹೊರಗೆ ಮಲಗಿದ್ದ ವೇಳೆ ಆಯಸಿಡ್ ದಾಳಿ ನಡೆಸಲಾಗಿತ್ತು.

ಪ್ರಕರಣದಲ್ಲಿ ಸ್ವಾತಿ, ರಮೇಶ್ ಹಾಗೂ ಯೋಗೇಶ್ ಎಂಬುವವರನ್ನು ಬಂಧಿಸಲಾಗಿದೆ. ಆಸಿಡ್ ದಾಳಿಯಿಂದ ಮುಖ ಹಾಗೂ ಬೆನ್ನು ಸುಟ್ಟು ಗಾಯಗೊಂಡಿದ್ದ ದೇವಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದೇವಿ ಬಿಎಂಟಿಸಿಯಲ್ಲಿ ನಿರ್ವಾಹಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಕೆಲಸ ಬಿಟ್ಟಿದ್ದರು. ದೇವಿ ಕೆಲಸ ಮಾಡುತ್ತಿದ್ದ ವೇಳೆ ಈಕೆಯ ಮಾತು ಕೇಳಿ ರಮೇಶ್ ಕುಮಾರ್ ಎಂಬಾತನಿಂದ ಪತ್ನಿ ಮತ್ತು ಮಕ್ಕಳು ದೂರವಾಗಿದ್ದರಂತೆ.

ದೇವಿಯಿಂದಲೇ ತನ್ನ ಸಂಸಾರ ಹಾಳಾಗಿದೆ ಎಂದು ರಮೇಶ್ ತನ್ನ ಗೆಳತಿ ಸ್ವಾತಿ ಬಳಿ ಹೇಳಿಕೊಂಡಿದ್ದ. ಹೀಗಾಗಿ ಸ್ವಾತಿ ಯೋಗೇಶ್ ಎಂಬಾತನ ಪರಿಚಯ ಮಾಡಿಕೊಟ್ಟಿದ್ದು, ಇಬ್ಬರು 10 ಸಾವಿರ ಸುಪಾರಿ ನೀಡಿ ಆಯಸಿಡ್ ದಾಳಿಯನ್ನು ಯೋಗೇಶ್ ಮೂಲಕ ಮಾಡಿಸಿದ್ದರು. ದೇವಿ ಮುಖ ಮತ್ತು ಬೆನ್ನಿನ ಭಾಗಕ್ಕೆ ಆಯಸಿಡ್ ತಾಗಿ ಗಾಯಗಳಾಗಿವೆ. ಪ್ರಕರಣ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!