Tuesday, May 21, 2024
spot_imgspot_img
spot_imgspot_img

ಶಬರಿಮಲೆಗೂ ಕೊರೊನ ಹಾವಳಿ-ಆರ್ಥಿಕ ನೆರವು ಕೋರಿದ ದೇವಸ್ವಂ ಮಂಡಳಿ

- Advertisement -G L Acharya panikkar
- Advertisement -

ಶಬರಿಮಲೆ: ಕೊರೊನಾದಿಂದಾಗಿ ಶಬರಿಮಲೆಗೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದ್ದರಿಂದ ದೇವಸ್ಥಾನದ ಆದಾಯ  ಕುಸಿದಿದೆ. ಇದರಿಂದಾಗಿ ದೇವಸ್ಥಾನದ ನಿರ್ವಹಣೆ ಕಷ್ಟವಾಗುತ್ತಿದ್ದು. ಕೋವಿಡ್‌ ನಿಯಮಾವಳಿಗಳನ್ನು ಸಡಿಲಿಸುವಂತೆ ಮತ್ತು ದೇವಸ್ಥಾನಕ್ಕೆ ಆರ್ಥಿಕ ನೆರವು ನೀಡುವಂತೆ ತಿರುವಾಂಕೂರ್‌ ದೇವಸ್ವಂ ಮಂಡಳಿ ಕೇರಳ ಸರ್ಕಾರಕ್ಕೆ ಮನವಿ ಮಾಡಿದೆ.

ಪ್ರಸಕ್ತ ಸಾಲಿನ ದರ್ಶನವು ಕಳೆದ ಸೋಮವಾರ ಆರಂಭವಾಗಿದ್ದು ಜನವರಿ ವೇಳೆಗೆ ಅಂತ್ಯಗೊಳ್ಳಲಿದೆ. ಪ್ರತಿ ವರ್ಷ ಭಕ್ತರಿಂದ ಬರುತ್ತಿದ್ದ ಆದಾಯವು ಸುಮಾರು 3.5 ಕೋಟಿ ಇರುತ್ತಿತ್ತು. ಆದರೆ ಈ ಬಾರಿ 10 ಲಕ್ಷಕ್ಕೆ ಇಳಿದಿದೆ.

ಸಾಮಾನ್ಯ ದಿನಗಳಲ್ಲಿ ದಿನಕ್ಕೆ 1000 ಭಕ್ತರಿಗೆ ಹಾಗೂ ವಾರಾಂತ್ಯದಲ್ಲಿ 2000 ಭಕ್ತರಿಗೆ ಮಾತ್ರ ಈಗ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಮಂಡಲಪೂಜೆ, ಮಕರವಿಳಕ್ಕು ಮುಂತಾದ ವಿಶೇಷ ಸಂದರ್ಭಗಳಲ್ಲಿ 5000 ಮಂದಿಗೆ ಅವಕಾಶ ನೀಡಲಾಗುತ್ತಿದೆ.

- Advertisement -

Related news

error: Content is protected !!