Tuesday, April 30, 2024
spot_imgspot_img
spot_imgspot_img

ಅಶ್ಲೀಲ ಸಿನಿಮಾಗಳ ನಿರ್ಮಾಣದ ಆರೋಪ; ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ

- Advertisement -G L Acharya panikkar
- Advertisement -

ನೀಲಿ ಸಿನಿಮಾಗಳನ್ನು ಮಾಡಿ ಅದನ್ನು ಬೇರೆ ಬೇರೆ ಆ್ಯಪ್​ಗಳಲ್ಲಿ ಅಪ್​ಲೋಡ್​ ಮಾಡುತ್ತಿದ್ದ ಆರೋಪದ ಮೇಲೆ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಈ ವಿಚಾರ ಶಿಲ್ಪಾ ಶೆಟ್ಟಿ ಅಭಿಮಾನಿಗಳಿಗೆ ಅಕ್ಷಕರಶಃ ಶಾಕ್​ ನೀಡಿದೆ. ಸೋಮವಾರ (ಜುಲೈ 19) ರಾಜ್​ ಕುಂದ್ರಾ ಅವರನ್ನು ಬಂಧಿಸಲಾಗಿದೆ. ಪಾರ್ನ್​ ಸಿನಿಮಾಗಳನ್ನು ಮಾಡುತ್ತಿದ್ದ ಜಾಲ ಆ್ಯಕ್ಟಿವ್​ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಫೆಬ್ರವರಿಯಲ್ಲೇ ದೂರು ದಾಖಲಾಗಿತ್ತು. ರಾಜ್​ ಕುಂದ್ರಾ ಈ ಪ್ರಕರಣದ ಪ್ರಮುಖ ರುವಾರಿ. ಈ ಪ್ರಕರಣದ ಕುರಿತು ಮುಂಬೈ ಪೊಲೀಸರಿಗೆ ಸಾಕ್ಷ್ಯ ಕೂಡ ದೊರೆತಿದೆ.

ಫೆಬ್ರವರಿ 2021ರಂದು ಕ್ರೈಮ್​ ಬ್ರ್ಯಾಂಚ್​ನಲ್ಲಿ ಪ್ರಕರಣ ದಾಖಲಾಗಿತ್ತು. ನೀಲಿ ಸಿನಿಮಾಗಳನ್ನು ಚಿತ್ರೀಕರಣ ಮಾಡಿ, ಕೆಲ ಆ್ಯಪ್​ಗಳ ಮೂಲಕ ಇದನ್ನು ಅಪ್​ಲೋಡ್​ ಮಾಡಲಾಗುತ್ತಿದೆ ಎನ್ನುವ ಮಾಹಿತಿ ನಮಗೆ ಲಭ್ಯವಾಗಿತ್ತು. ಇಂದು (ಜುಲೈ 19) ನಾವು ರಾಜ್​ ಕುಂದ್ರಾ ಅವರನ್ನು ಬಂಧಿಸಿದ್ದೇವೆ. ಇಡೀ ಪ್ರಕರಣದ ರುವಾರಿ ಅವರೇ ಆಗಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ತನಿಖೆ ಪೂರ್ಣಗೊಳ್ಳುವವರೆಗೂ ಏನನ್ನೂ ಹೇಳುವುದಿಲ್ಲ’ ಎಂದು ಮುಂಬೈ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಂಡ್ರಿಂಗ್​ ಹೆಸರಿನ ಇಂಗ್ಲೆಂಡ್​ ಮೂಲದ ಕಂಪನಿ ಮೇಲೆ ರಾಜ್​ 10 ಕೋಟಿ ಹೂಡಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಉಮೇಶ್ ಎಂಬಾತನನ್ನು ಬಂಧಿಸಲಾಗಿದೆ. ಕುಂದ್ರಾ ಹಾಗೂ ಉಮೇಶ್​ ನಡುವೆ ಒಪ್ಪಂದ ಇತ್ತು ಎನ್ನಲಾಗಿದೆ.

ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್​ಕುಂದ್ರಾ 2009ರಲ್ಲಿ ಮದುವೆ ಆದರು. ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಈ ಸುದ್ದಿ ಬರ ಸಿಡಿಲಿನಂತೆ ಬಂದಪ್ಪಳಿಸಿದ್ದು, ಅಭಿಮಾನಿಗಳು ಹಾಗೂ ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಇದು ಶಾಕ್​ ನೀಡಿದೆ.

- Advertisement -

Related news

error: Content is protected !!