Tuesday, April 23, 2024
spot_imgspot_img
spot_imgspot_img

ನನ್ನ ಗಂಡ ಮುಗ್ಧ ಮತ್ತು ನಿರಾಪರಾಧಿ; ಮೌನ ಮುರಿದ ಶಿಲ್ಪಾ ಶೆಟ್ಟಿ

- Advertisement -G L Acharya panikkar
- Advertisement -

ಪೋರ್ನ್​​ ಸಿನಿಮಾ ನಿರ್ಮಾಣ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ಉದ್ಯಮಿ ರಾಜ್​​ ಕುಂದ್ರಾ ಬಗ್ಗೆ ಪತ್ನಿ ಶಿಲ್ಪಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ರಾಜ್​​ ಕುಂದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದ ಬಳಿಕ ಇದೇ ಮೊದಲ ಬಾರಿಗೆ ನಟಿ ಶಿಲ್ಪಾ ಶೆಟ್ಟಿ ಮೌನ ಮುರಿದಿದ್ದಾರೆ.

“ನನ್ನ ಗಂಡ ಮುಗ್ಧ. ಇವರು ಯಾವುದೇ ತಪ್ಪು ಮಾಡಿಲ್ಲ. ಪೋರ್ನ್​​​​​ ಸಿನಿಮಾ ಚಿತ್ರೀಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ” ಎಂದು ತನ್ನ ನಿವಾಸಕ್ಕೆ ಮುಂಬೈ ಕ್ರೈಂ ಬ್ರಾಂಚ್​ ಪೊಲೀಸರು ವಿಚಾರಣೆಗಾಗಿ ಭೇಟಿ ನೀಡಿದ್ದ ವೇಳೆ ಶಿಲ್ಪಾ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ಇನ್ನು, ಪ್ರಕರಣ ಸಂಬಂಧ ರಾಜ್​​ ಕುಂದ್ರಾ-ಶಿಲ್ಪಾ ಶೆಟ್ಟಿ ಮುಂಬೈ ನಿವಾಸಕ್ಕೆ ಭೇಟಿ ನೀಡಿದ್ದ ಪೊಲೀಸರು ಸುಮಾರು 6 ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಶಿಲ್ಪಾ ಶೆಟ್ಟಿಯವರಿಂದ ಹೇಳಿಕೆ ಪಡೆದಿದ್ದಾರೆ.

ನೀಲಿಚಿತ್ರಗಳ ಚಿತ್ರೀಕರಣದಲ್ಲಿ ನನ್ನ ಗಂಡ ಭಾಗಿಯಾಗಿಯಾದ ಬಗ್ಗೆ ನನಗ್ಯಾವುದೇ ಮಾಹಿತಿ ಇಲ್ಲ. ನನ್ನ ಗಂಡ ಮುಗ್ಧ ಮತ್ತು ನಿರಾಪರಾಧಿ. ಕಾಮೋದ್ರೇಕ ವಿಡಿಯೋಗಳಿಗೂ ಮತ್ತು ನೀಲಿ ಚಿತ್ರಗಳಿಗೂ ಬಹಳ ವ್ಯತ್ಯಾಸವಿದೆ ಎಂದು ಹೇಳುವ ಮೂಲಕ ಶಿಲ್ಪಾ ಶೆಟ್ಟಿ ತನ್ನ ಪತಿಯನ್ನು ಸಮರ್ಥಿಸಿಕೊಂಡರು.

ನನ್ನ ಗಂಡನ ಸಂಬಂಧಿ ಪ್ರದೀಪ್​​ ಎಂಬುವರು ಈ ಬ್ಯುಸಿನೆಸ್​​​​ ನಡೆಸುತ್ತಿರುವುದು. ಇದರಲ್ಲಿ ರಾಜ್​​ ಕುಂದ್ರಾ ಪಾತ್ರವೇನಿಲ್ಲ. ಯಾರೋ ದ್ವೇಷಕ್ಕಾಗಿ ನನ್ನ ಗಂಡನನ್ನು ಜೈಲುಪಾಲು ಮಾಡಲು ಹೀಗೆ ಸಂಚು ರೂಪಿಸಿದ್ದಾರೆ ಎಂದಿದ್ದಾರೆ.

- Advertisement -

Related news

error: Content is protected !!