Saturday, June 20, 2026
spot_imgspot_img
spot_imgspot_img

ಶುಭ ಕಾರ್ಯಕ್ಕೆ ಹೊರಟಿದ್ದ ವೇಳೆ ಭೀಕರ ಅಪಘಾತ: ಓರ್ವ ಸಾವು – ಮತ್ತಿಬ್ಬರು ಗಂಭೀರ

- Advertisement -
- Advertisement -

ಶಿರಸಿ: ಟೆಂಪೋ ಮತ್ತು ಟಾಟಾ ಏಸ್ ಗಾಡಿ ನಡುವೆ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಶುಭ ಕಾರ್ಯಕ್ಕೆ ಸಾಗರದಿಂದ ಶಿರಸಿಗೆ ಹೊರಟಿದ್ದ ಟೆಂಪೋ ಮತ್ತು ಸಿದ್ದಾಪುರಕ್ಕೆ ಸಾಗುತ್ತಿದ್ದ ಗ್ರಾನೈಟ್ ತುಂಬಿದ ಟಾಟಾ ಏಸ್ ಗಾಡಿ ನಡುವೆ ಡಿಕ್ಕಿಯಾದ ಘಟನೆ ಅಜ್ಜೀಬಳ ಸಮೀಪ ನಡೆದಿದೆ. ಟಾಟಾ ಎಸ್ ವಾಹನ ಚಾಲಕ ಇಸ್ಮಾಯಿಲ್ ಸ್ಥಳದಲ್ಲೇ ಮೃತಪಟ್ಟ ದುರ್ದೈವಿ.

ಮದುವೆ ಟೆಂಪೋದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿಯ ಆಸ್ಪತ್ರೆಗೆ ಸೇರಿಲಾಗಿದೆ. ಟೆಂಪೊದಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಗೆ ಕರೆದೊಯ್ಯಲಾಗಿದೆ.

- Advertisement -

Related news

error: Content is protected !!