Sunday, May 5, 2024
spot_imgspot_img
spot_imgspot_img

ವಿಟ್ಲ ಶಿವಂ ಡ್ಯಾನ್ಸ್ ಅಕಾಡೆಮಿ ವಿಟಿವಿ ಸಹಭಾಗಿತ್ವದಲ್ಲಿ ನಡೆದ ಶ್ರೀಕೃಷ್ಣ ವೇಷ ಸ್ಪರ್ಧೆ: ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಶಿವಂ ಡ್ಯಾನ್ಸ್ ಅಕಾಡೆಮಿ ವತಿಯಿಂದ ವಿ ಟಿವಿ ಸಹಭಾಗಿತ್ವದಲ್ಲಿ ನಡೆದ ಕೃಷ್ಣ ವೇಷ ಸ್ಪರ್ಧೆ 2020 ಇದರ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ವಿಟ್ಲದ ಶಿವಂ ಡ್ಯಾನ್ಸ್ ಅಕಾಡೆಮಿ ಕಚೇರಿಯಲ್ಲಿ ನಡೆಯಿತು.

ಪ್ರಥಮ ಬಹುಮಾನವನ್ನು ಮಾಹಿ.ಎಲ್ ಇರಂದೂರು ಪಡೆದುಕೊಂಡರು.ದ್ವಿತೀಯ ಬಹುಮಾನವನ್ನು ಶಾರ್ವರಿ ಕೌಡಿಚ್ಚಾರು ಪಡೆದುಕೊಂಡರು.ಮತ್ತು ತೃತೀಯ ಬಹುಮಾನವನ್ನು ಸಾನಿಧ್ಯ ಆಚಾರ್ಯ ಉಡುಪಿ ಪಡೆದುಕೊಂಡರು.ಮತ್ತು 10 ಪ್ರೋತ್ಸಾಹಕರ ಬಹುಮಾನಗಳನ್ನು ನೀಡಲಾಯಿತು.ತೀರ್ಪುಗಾರರಿಂದ ಮೆಚ್ಚುಗೆ ಗಳಿಸಿ ಆಯೋಜಕರಿಂದ ವಿಶೇಷ ಬಹುಮಾನಕ್ಕೆ ಆಯ್ಕೆಯಾದ ಒಂದು ವರ್ಷದ ಒಳಗಿನ ಮಕ್ಕಳಾದ ಹನ್ಸ್ ಕಿರಣ್ ಶೆಟ್ಟಿ ಕಡೆಶಿವಾಲಯ, ವಾಗ್ಮಿ.ಕೆ.ಕೆಮ್ಮಯಿ,ಹೃಧಾನ್ ಕಾಳಮ್ಮನೆ ಜಾಲ್ಸೂರು, ಜಿಯನ್ಸ್ ಮಂಗಳೂರು,ವಿಹಾನ್ ಕಾವೂರು,ಸಂಚಿತ್ ಉಡುಪಿ,ಮೋಕ್ಷ್ ತೊಕ್ಕೊಟ್ಟು,ಹಾರ್ವಿಕ್ .ಆರ್,ಶಿವಾನ್ಸ್ ವಿ ಶೆಟ್ಟಿ ಪುತ್ತೂರು ಇವರಿಗೆ ಬಹುಮಾನ ನೀಡಲಾಯಿತು.

ವಿಟ್ಲ ಆರ್ ಕೆ ಆರ್ಟ್ಸ್ ನ ರಾಜೇಶ್ ವಿಟ್ಲ ಮಾತನಾಡಿ ಹೇಗೆ ಬದುಕು ಬೇಕು ಎಂಬುದನ್ನು ಕೊರೊನಾ ಕಲಿಸಿಕೊಟ್ಟಿದೆ. ಇದು ಸ್ಪರ್ಧೆಯಲ್ಲ ಜನರ ನಡುವಿನ ಬೇಟಿಯಾಗಿದೆ. ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು.‌ ಕೊರೊನಾ ಮಹಾಮಾರಿ ಮೂಲಕ ಪ್ರಕೃತಿ ನಮಗೆ ಪಾಠ ಕಲಿಸಿದೆ. ಮಕ್ಕಳ ಜೀವನಕ್ಕೆ ಪೂರಕ ತರಬೇತಿ ನೀಡಬೇಕು. ಸಂಸ್ಕೃತಿ, ಜೀವನ ಚಟುವಟಿಕೆಗೆ ಮಕ್ಕಳನ್ನು ಪ್ರೇರೆಪಿಸಬೇಕು. ಇದರಿಂದ ಮಕ್ಕಳು ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.

ಫೋಟೋಗ್ರಾಫರ್ಸ್ ಅಸೋಶಿಯೇಶನ್ ಇದರ ಮಾಜಿ ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ ಶಿವಂ ಡ್ಯಾನ್ಸ್ ಅಕಾಡೆಮಿ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂತಹ ಸ್ಪರ್ಧೆಗಳು ನಡೆದಾಗ ಕೊರೊನಾ ಆತಂಕ ದೂರವಾಗುತ್ತಿದೆ ಎಂದರು.

ವಿಟ್ಲ ಪ್ರೋಬೆಷನರಿ ಎಸೈ ಕೃಷ್ಣಾನಂದ ಅಧ್ಯಕ್ಷತೆ ವಹಿಸಿದ್ದರು.ಪುತ್ತೂರು ತತ್ವ ಸ್ಕೂಲ್ ಆಫ್ ಆರ್ಟ್ಸ್ ಇದರ ನಿರ್ದೇಶಕ ಟಿಲಾಕ್ಷ, ಉದ್ಯಮಿ ಪ್ರದೀಪ್ ನಾಯ್ಕ, ಪತ್ರಕರ್ತ ಮಹಮ್ಮದ್ ಅಲಿ ವಿಟ್ಲ ಉಪಸ್ಥಿತರಿದ್ದರು.
ದೀಪಿಕಾ ಬಹುಮಾನಿತರ ಪಟ್ಟಿ ಓದಿದರು. ವಿಟ್ಲ ಶಿವಂ ಡ್ಯಾನ್ಸ್ ಅಕಾಡೆಮಿಯ ನಿರ್ದೇಶಕ ಸುಧೀರ್ ನಾಯ್ಕ ಸ್ವಾಗತಿಸಿದರು. ಮಹೇಶ್ ಕುಮಾರ್ ಶೆಟ್ಟಿ ನೆಟ್ಲ ವಂದಿಸಿದರು. ಶ್ವೇತಾ ಎಂ ಕೇಪು ನಿರೂಪಿಸಿದರು.ಶಿವಂ ಡಾನ್ಸ್ ಅಕೆಡಮಿ ಇದರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!