Sunday, April 28, 2024
spot_imgspot_img
spot_imgspot_img

ಭೀಕರ ರಸ್ತೆ ಅಪಘಾತ ; ಐವರು ಮೃತ್ಯು , ನಾಲ್ವರು ಗಂಭೀರ

- Advertisement -G L Acharya panikkar
- Advertisement -
vtv vitla

ಧಾರವಾಡ: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಹಾಗೂ ಓರ್ವ ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ತೇಗೂರು ಗ್ರಾಮದ ಬಳಿ ವರದಿಯಾಗಿದೆ.

ಮೃತರನ್ನು ನಾಗಪ್ಪ ಈರಪ್ಪ ಮುದ್ದೋಜಿ(29), ಅವರಾದಿ ಗ್ರಾಮದ ಮಹಂತೇಶ್ ಬಸಪ್ಪ ಮುದ್ದೊಜಿ(40), ಬಸವರಾಜ್ ಶಿವಪುತ್ರಪ್ಪ ನರಗುಂದ(35), ನಿಚ್ಚಣಕಿ ಗ್ರಾಮದ ಶ್ರೀಕುಮಾರ್ ನರಗುಂದ, ಈರಣ್ಣಾ ಗುರುಸಿದ್ದಪ್ಪ ರಾಮನಗೌಡರ್ (35) (ಪಾದಚಾರಿ) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಅಗ್ನಿಪಥ ಯೋಜನೆಯಡಿ ಸೈನ್ಯಕ್ಕೆ ಸೇರ್ಪಡೆಯಾಗಿದ್ದ ಯುವಕನನ್ನು ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬೀಳ್ಕೊಡಲು ಹೋಗುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದ ಮಂಜುನಾಥ ಮಹಾಂತೇಶ ಮುದ್ದೊಜಿ ಅಗ್ನಿ ಪಥ ಯೋಜನೆಯಡಿ ಸೇನೆಗೆ ನೇಮಕಗೊಂಡಿದ್ದರು. ಅವರು ಹೈದ್ರಾಬಾದ್‌ಗೆ ತರಬೇತಿ ಕೇಂದ್ರಕ್ಕೆ ತೆರಳುತ್ತಿದ್ದರಿಂದ ಅವರ ಕುಟುಂಬಸ್ಥರು ಹಾಗೂ ಆತ್ಮೀಯರು ಮಂಜುನಾಥನನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಬೀಳ್ಕೊಡಲು ಬಂದಿದ್ದರು. ಈ ವೇಳೆ ಧಾರವಾಡ ಕಡೆಗೆ ಬರುತ್ತಿದ್ದ ಕಾರು ತೇಗೂರು ಬಳಿಯ ಢಾಬಾ ಬಳಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಲಾರಿಗೆ ಡಿಕ್ಕಿ ಹೊಡೆದ ನಂತರ ಪಲ್ಟಿಯಾದ ಕಾರು ಪಾದಚಾರಿಯೊಬ್ಬರ ಮೇಲೆ ಹರಿದು ಅವರೂ ಸಾವಿಗೀಡಾಗಿದ್ದಾರೆ. ಮೃತರ ಪೈಕಿ ನಾಲ್ವರು ಸಂಬಂಧಿಗಳಾಗಿದ್ದಾರೆ. ಪಾದಾಚಾರಿ ಹೆಬ್ಬಳ್ಳಿಯ ನಿವಾಸಿ ಈರಣ್ಣ ಗುರುಸಿದ್ದಪ್ಪ ರಾಮನಗೌಡರ್ (35) ಡಾಬಾವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ . ಡ್ಯೂಟಿ ಮುಗಿಸಿ ಹೋಗುವಾಗ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಉಳಿದಂತೆ ಕಾರಿನಲ್ಲಿದ್ದ ಮೂರು ಜನರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. 7 ವರ್ಷದ ಶ್ರವನಕುಮಾರ್ ನರಗುಂದ, 22 ವರ್ಷದ ಮಡಿವಾಳಪ್ಪ ಅಳ್ನಾವರ ಎಂಬುವರನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಪ್ರಕಾಶ್ ಶಂಕರಗೌಡ ಪಾಟೀಲ, ಮಂಜುನಾಥ ಮಹಾಂತೇಶ್ ಮುದ್ದುಜಿ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!