Tuesday, July 21, 2026
spot_imgspot_img
spot_imgspot_img

ಶಿವಮೊಗ್ಗ : ಲಾರಿ ಮತ್ತು ಬೈಕ್‌ ನಡುವೆ ಅಪಘಾತ- ಬೈಕ್ ಸವಾರ ಮೃತ್ಯು

- Advertisement -
- Advertisement -

ಶಿವಮೊಗ್ಗ : ಲಾರಿ ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗದ ವಿದ್ಯಾನಗರದ ಮೇಲ್ಸೇತುವೆಯ ತಿರುವಿನಲ್ಲಿ ಸಂಭವಿಸಿದೆ.

ಚನ್ನಗಿರಿ ತಾಲೂಕಿನ ರಾಘವೇಂದ್ರ ಎಂಬುವವರು ಮೃತಪಟ್ಟಿದ್ದಾರೆ. ಲಾರಿ ಮತ್ತು ಬೈಕ್‌ ಮೇಲ್ಸೇತುವೆಯಿಂದ ಒಟ್ಟಿಗೆ ಕೆಳಗೆ ಬಂದಿವೆ. ವಿದ್ಯಾನಗರದ ಕಡೆಗೆ ತಿರುವು ಪಡೆಯುವಾಗ ಲಾರಿಯ ಹಿಂಬದಿ ಚಕ್ರಗಳ ಅಡಿಗೆ ಬೈಕ್‌ ಸವಾರ ಸಿಲುಕಿದ್ದಾನೆ. ಆತನ ಮೇಲೆ ಲಾರಿ ಚಕ್ರಗಳು ಹರಿದಿದ್ದು, ಸ್ಥಳದಲ್ಲೆ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂಗೆ ಪೂರ್ವ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮೆಗ್ಗಾನ್‌ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

- Advertisement -

Related news

error: Content is protected !!