Thursday, July 3, 2025
spot_imgspot_img
spot_imgspot_img

ಇಫ್ಕೋ ಮತ್ತು ಸದಾಸ್ಮಿತಾ ಫೌಂಡೇಶನ್ ಇದರ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಇಫ್ಕೋ ಮತ್ತು ಸದಾಸ್ಮಿತಾ ಫೌಂಡೇಶನ್ ಇದರ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮ ಶ್ರೀ ರಾಮ ಪದವಿ ಕಾಲೇಜು ಕಲ್ಲಡ್ಕ ಇಲ್ಲಿ ಡಿ.26/12/2020 ಶನಿವಾರದಂದು ನಡೆಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಡಾ.ಯಂ.ಯನ್, ರಾಜೇಂದ್ರ ಕುಮಾರ್, ಬಂಟ್ವಾಳ ಶಾಸಕಾರದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು, ಕೋಲಾರ ಶಾಸಕರಾದ ಶ್ರೀನಿವಾಸ ಗೌಡ, ಸದಾಸ್ಮಿತಾ ಫೌಂಡೇಶನ್ ಇದರ ಅಧ್ಯಕ್ಷರಾದ ಶಿವರಾಮ್, ಮತ್ತು ಇಫ್ಕೋ ಇದರ ಪ್ರಮುಖರಾದ ನಾರಾಯಣ ಸ್ವಾಮಿ , ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಸಂಸ್ಥೆಯ ಸಂಚಾಲಕರಾದ ವಸಂತ ಮಾಧವ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸುಮಾರು 30 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ್ದು. ಮುಂದಿನ ಒಂದು ತಿಂಗಳೊಳಗೆ ಪ್ರಥಮ ವರ್ಷದ ಎಲ್ಲಾ 90 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲಾಗುವುದು ಎಂದು ಕೇಂದ್ರ ಸಚಿವರಾದ ಡಿವಿ ಸದಾನಂದ ಗೌಡ ಇವರು ಕಾರ್ಯಕ್ರಮದಲ್ಲಿ ಆಶ್ವಾಸನೆ ನೀಡಿದರು.ವಿಶ್ವವು ಸ್ಪರ್ಧಾತ್ಮಕವಾಗುತ್ತಿದ್ದು ವಿದ್ಯಾರ್ಥಿಗಳು ಈ ಸವಾಲನ್ನು ಎದುರಿಸಲು ತಂತ್ರಜ್ಞಾನದ ಉಪಯೋಗವನ್ನು ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ,ಭಾರತೀಯ ಸಂಸ್ಕೃತಿ,ಸಂಸ್ಕಾರದ ಜೊತೆಗೆ ಆಧುನೀಕರಣಕ್ಕೆ ವಿದ್ಯಾರ್ಥಿಗಳು ಸಿದ್ದರಾಗಬೇಕು.ಈ ಹಿನ್ನೆಲೆಯಲ್ಲಿ ಶ್ರೀ ರಾಮ ವಿದ್ಯಾಕೇಂದ್ರ ಸಂಸ್ಕಾರದ ಜೊತೆಗೆ ಆಧುನಿಕ ಶಿಕ್ಷಣವನ್ನು ಕೊಡುವ ಕೆಲಸವನ್ನು ಕಳೆದ ಮೂರು ದಶಕಗಳಿಂದ ಮಾಡುತ್ತಿದೆ ಎಂದರು. ಉಪನ್ಯಾಸರಾದ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತ ಸ್ವಾಗತಿಸಿ,ವಿದ್ಯಾ ವಂದಿಸಿದರು.

- Advertisement -

Related news

error: Content is protected !!