Monday, June 15, 2026
spot_imgspot_img
spot_imgspot_img

ನ್ಯಾಯಾಲಯದ ಆವರಣದಲ್ಲಿ ಫೈಟರ್‌ ಕೋಳಿಗಳು..! ಕುತೂಹಲ ಮೂಡಿಸಿದ ಹರಾಜು ಪ್ರಕ್ರಿಯೆ

- Advertisement -
- Advertisement -

ಕೋರ್ಟ್‌ ಆವರಣದಲ್ಲಿ 17 ಕೋಳಿಗಳು ಸಾಲುಗಟ್ಟಿ ನಿಂತಿದ್ದವು. ಕೋರ್ಟಿಗೆ ಬಂದಿದ್ದ ಮಂದಿ ಕುತೂಹಲದಿಂದ ಅತ್ತ ನೋಡುತ್ತಿದ್ದರು. ಅಂದಹಾಗೆ ಈ ಅಪರೂಪದ ದೃಶ್ಯ ಕಂಡು ಬಂದಿದ್ದು ಕಾಸರಗೋಡಿನ ಒಂದನೇ ಕ್ಲಾಸ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆವರಣದಲ್ಲಿ ೧೭ ಕೋಳಿಗಳನ್ನು ಹರಾಜಿಗೆ ಇಡಲಾಗಿತ್ತು. ಕೋಳಿ ಫೈಟಿಂಗ್ ಪ್ರಕರಣಗಳು ನಿತ್ಯ ವರದಿಯಾಗುತ್ತಿದ್ದರೂ ನ್ಯಾಯಾಲಯದ ಆವರಣದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸೆರೆ ಸಿಕ್ಕ ಕೋಳಿಗಳನ್ನು ಹರಾಜು ಹಾಕಿರುವುದು ಇದೇ ಮೊದಲು. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆವರಣಕ್ಕೆ ಬಂದವರಿಗೂ ಕುತೂಹಲ ಮೂಡಿಸಿದೆ.

ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸ್ ದಾಳಿ.! 17 ಹುಂಜ ವಶಕ್ಕೆ
ಕರ್ನಾಟಕಕ್ಕೆ ಹೊಂದಿಕೊಂಡಿರುವ ಮೂಡಂಬೈಲ್ ಪಟ್ಟತ್ತೂರು ಪಾಡಂಗರ ಭಗವತೀ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಮೈದಾನದಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಅಡ್ಡೆಗೆ ಮಂಜೇಶ್ವರಂ ಎಸ್‌ಐ ಎ.ಅನ್ಸಾರ್ ನೇತೃತ್ವದ ತಂಡ ದಾಳಿ ನಡೆಸಿತ್ತು. ಈ ವೇಳೆ ಹಣ ಬೆಟ್ಟಿಂಗ್ ನಲ್ಲಿ ತೊಡಗಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 17 ಹುಂಜ ಹಾಗೂ 20,550 ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಹರಾಜಿನಲ್ಲಿ ಸಿಕ್ಕಿತು 31,930 ರೂ..!
ಹರಾಜಿನಲ್ಲಿ ಮಾರಾಟವಾದ ಕೋಳಿಗಳಿಂದ 31,930 ಹಣ ಲಭಿಸಿದೆ. ಒಂದು ಕೋಳಿ 3,640 ರೂ .ಗೆ ಮಾರಾಟವಾಯಿತು. 7 ಕೋಳಿಗಳು 2,500 ರಿಂದ 2,800 ರವರೆಗೆ ಮಾರಾಟವಾಗಿವೆ. ಹರಾಜಿನಲ್ಲಿ ಕಡಿಮೆ ಬೆಲೆ ಅಂದರೆ ಒಂದು ಕೋಳಿಗೆ 750 ರೂ ಮಾರಾಟವಾಗಿತ್ತು.

- Advertisement -

Related news

error: Content is protected !!