Thursday, June 4, 2026
spot_imgspot_img
spot_imgspot_img

ಮದುವೆ ಮಾಡಿಲ್ಲ ಎಂದು ಹೆತ್ತಮ್ಮನನ್ನೇ ಕೊಂದ ಪಾಪಿ ಮಗ

- Advertisement -
- Advertisement -

ಮದುವೆ ಮಾಡಿಲ್ಲ ಎಂದು ಹೆತ್ತ ತಾಯಿಯನ್ನೇ ಮಗ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲುಬುರುಗಿಯಲ್ಲಿ ನಡೆದಿದೆ.

ಶೋಭಾ (45) ಮಗನಿಂದ ಕೊಲೆಯಾದ ತಾಯಿ. ಮಗ ಅನಿಲ್ ಮನೆಗೆ ಕುಡಿದು ಬಂದಿದ್ದು, ಕುಡಿದ ನಶೆಯಲ್ಲಿ ಮದುವೆ ಬಗ್ಗೆ ಮಾತನಾಡಿ ತಾಯಿಯೊಂದಿಗೆ ಜಗಳವಾಡಿದ್ದಾನೆ. ಇನ್ನಷ್ಟು ಕೋಪಗೊಂಡ ಅನಿಲ್ ತನಗೆ ಏಕೆ ಮದುವೆ ಮಾಡಿಸಿಲ್ಲ ಎಂದು ತಾಯಿಗೆ ಪ್ರಶ್ನೆ ಮಾಡಿದ್ದಾನೆ. ಬಳಿಕ ಕುಡಿದ ನಶೆಯಲ್ಲಿ ಅಲ್ಲೇ ಇದ್ದ ಕಟ್ಟಿಗೆಯಿಂದ ಕೊಡೆದು ಕೊಲೆ ಮಾಡಿದ್ದಾನೆ. ಈ ಬಗ್ಗೆ ಚಿಂಚೋಳಿಯ ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅನಿಲ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!