Wednesday, April 24, 2024
spot_imgspot_img
spot_imgspot_img

ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ 10 ಆಸ್ಪತ್ರೆಗಳ ಸಹಯೋಗದಲ್ಲಿ 200ನೇ ರಕ್ತದಾನ ಶಿಬಿರ

- Advertisement -G L Acharya panikkar
- Advertisement -

ವಿಟ್ಲ(ನ.8): ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ 10 ಆಸ್ಪತ್ರೆಗಳ ಸಹಯೋಗದಲ್ಲಿ 200ನೇ ರಕ್ತದಾನ ಶಿಬಿರ ಕೆ. ಜಿ. ಎನ್ ಕ್ಯಾಂಪಸ್ ಮಿತ್ತೂರಿನಲ್ಲಿ ನಡೆಯಿತು.

ಉಡುಪಿ ಚಿಕ್ಕಮಗಳೂರು ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮಾಣಿ ಉಸ್ತಾದ್ ದುವಾಃ ಆರ್ಶೀವಚನ ನೀಡಿದರು.ಮಾಜಿ ಸಚಿವ ರಮಾನಾಥ ರೈ ಮಾತನಾಡಿ ರಕ್ತದಾನ ಶ್ರೇಷ್ಠದಾನವಾಗಿದೆ. ರಕ್ತಕ್ಕೆ ಬೇರೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ರಕ್ತ ನೀಡುವ ಮೂಲಕ ಒಂದು ಜೀವವನ್ನು ಉಳಿಸಬಹುದು. ಮನುಷ್ಯರನ್ನು ಪ್ರೀತಿ ಮಾಡುವ ವ್ಯಕ್ತಿ ದೇವರನ್ನು ಕೂಡಾ ಪ್ರೀತಿಸುತ್ತಾನೆ. ರಕ್ತದಾನಗಳ ಮೂಲಕ ಸೌಹಾರ್ದತೆ ನೆಲೆಯಾಗುತ್ತದೆ ಎಂದರು.

ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ ಬದುಕನ್ನು ಬಲಿ ಕೊಡಬಾರದು. ಬದುಕನ್ನು ಉತ್ತಮ ಕಾರ್ಯಗಳಿಗೆ ಸದ್ವಿನಿಯೋಗಪಡಿಸಬೇಕು. ರಕ್ತದಾನ ಶಿಬಿರಗಳು ಸಮಾಜದ ಅಭ್ಯೂದಯಕ್ಕೆ ಕಾರಣವಾಗಿದೆ. ಪ್ರತಿಯೊಬ್ಬರಿಂದ ಸಮಾಜ ಕಟ್ಟುವ ಕಾರ್ಯವಾಗಬೇಕು. ತ್ಯಾಗಪೂರ್ಣ ಸೇವೆ ಶಿಬಿರಗಳ ಮೂಲಕ ನಡೆಯಬೇಕು ಎಂದರು.

ದ.ಕ ಜಿಲ್ಲಾ ಸಮಿತಿ ವತಿಯಿಂದ ಕೆಸಿಎಪ್ ಒಮನ್ ಚಾರ್ಟಡ್ ವಿಮಾನ ಸ್ವಾಗತಿಸಿದ ಅಬ್ದುಲ್ ಹಮೀದ್ ಬಜ್ಪೆ, ಅಬ್ದುಲ್ ರಹಿಮಾನ್ ಮೊಗರ್ಪಣೆ, ಅಶ್ರಪ್ ಕಿನಾರ ಅವರನ್ನು ಗೌರವಿಸಲಾಯಿತು.ಯುವ ಬರಹಗಾರರ ಸಿ ಐ ಇಸ್ಹಾಕ್ ಪಜೀರ್ ಅವರ ‘ಅಲ್ ಮಸಾಜಿದ್’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಶಾಸಕ ಯು ಟಿ ಖಾದರ್ ಶುಭ ಹಾರೈಸಿದರು. ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಇಸ್ಮಾಯೀಲ್ ಮಾಸ್ಟರ್ ಮಂಗಲಪದವು ಅವರನ್ನು ಸನ್ಮಾನಿಸಲಾಯಿತು.

ಜಿಂ ಎಂ ಕಾಮಿಲ್ ಸಖಾಫಿ,ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಫಿಲ್ ಸುಫ್ಯಾನ್ ಸಖಾಫಿ,ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಸ್ ಮಹಮ್ಮದ್, ಚಂದ್ರ ಪ್ರಕಾಶ್‌ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ,ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ, ಸಿರಾಜುದ್ದೀನ್ ಸಖಾಫಿ ಕನ್ಯಾನ,ಮಹಮ್ಮದ್ ಅಲಿ ಸಖಾಫಿ ಸುರಿಬೈಲು, ಇಸ್ಮಾಯೀಲ್ ಮಾಸ್ಟರ್ , ಮೋಂಟೆಪದವು,ಪ್ರಭಾಕರ ರೈ ಸುಳ್ಯ,ಹಮೀದ್ ಹಾಜಿ ಕೊಡಂಗಾಯಿ,ಸಲೀಂ ಹಾಜಿ ಬೈರಿಕಟ್ಟೆ, ಕರೀಂ ಕದ್ಕಾರ್, ಜಬ್ಬಾರ್ ಬೋಳಿಯಾರ್,ಹಾಶಿರ್ ಪೆರಿಮಾರ್, ಕೆಸಿಎಪ್ ನಾಯಕರಾದ ಖಲಂದರ್ ಕಬಕ, ಅಶ್ರಪ್ ಕಟ್ಟದ ಪಡ್ಪು, ಖಲಂದರ್ ಬಾಳೆಹೊನ್ನೂರು, ಮೊಹಮ್ಮದ್ ಕುಂಬ್ರ, ನಾಸೀರ್ ಬೇಂಗಿಲ ಮೊದಲಾದವರು ಉಪಸ್ಥಿತರಿದ್ದರು. ರಶೀದ್ ಹಾಜಿ ವಗ್ಗ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು ಹಾಗೂ ಮಹಮ್ಮದ್ ಶರೀಫ್ ಬೆರ್ಕಳ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!