- Advertisement -
- Advertisement -



ಹಳೇ ವೈಷಮ್ಯದ ಹಿನ್ನೆಲೆ ದಸರಾ ಹಬ್ಬಕ್ಕೆಂದು ಊರಿಗೆ ಬಂದಿದ್ದ ವ್ಯಕ್ತಿಯ ಶಿರಚ್ಚೇದ ಮಾಡಿ ಹತ್ಯೆಗೈದ ಭೀಕರ ಘಟನೆ ಕಲಬುರ್ಗಿಯ ಅಫಜಲಪುರ ತಾಲೂಕಿನ ಸಿಧನೂರು ಗ್ರಾಮದಲ್ಲಿ ನಡೆದಿದೆ.
ಬಲಭೀಮ ಸಗರ(23) ಕೊಲೆಯಾದ ದುರ್ದೈವಿ. ಜಮೀನು ವಿಚಾರವಾಗಿ ಗಲಾಟೆಯಲ್ಲಿ ಜೈಲು ಸೇರಿದ್ದ ಬಲಭೀಮ ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದು ಕಲಬುರ್ಗಿಯಲ್ಲಿ ವಾಸವಿದ್ದ ದಸರಾ ಹಬ್ಬದ ಹಿನ್ನೆಲೆ ಊರಿಗೆ ಬಂದಿದ್ದವನನ್ನ ದುಷ್ಕರ್ಮಿಗಳು ಹಳೇ ವೈಷಮ್ಯ ಹಾಗೂ ಜಮೀನು ಗಲಾಟೆ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಸಿಪಿಐ ಪಂಡಿತ ಸಗರ, ರೇವೂರ ಬಿ ಠಾಣೆಯ ಪಿಎಸ್‌ಐ ಸವಿತಾ ಕಲ್ಲೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
- Advertisement -








