- Advertisement -
- Advertisement -




ಆಕಸ್ಮಿಕವಾಗಿ ತಮ್ಮದೇ ಸರ್ವಿಸ್ ರೈಫಲ್ನಿಂದ ಗುಂಡು ತಗುಲಿ ಯೋಧರೋರ್ವರು ಸಾವನ್ನಪ್ಪಿದ ಘಟನೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ರಾಯಚೂರು, ಮಾನ್ವಿ ತಾಲೂಕಿನ ಆರ್ಜಿ ಕ್ಯಾಂಪ್ ಸಿಐಎಸ್ಎಫ್ ಯೋಧ ರವಿಕಿರಣ್ (37) ಮೃತ ಯೋಧ
ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಯೋಧ ರವಿಕಿರಣ್ ಗೆ ಸೋಮವಾರ (ಮೇ 20) ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ತಮ್ಮದೇ ಸರ್ವಿಸ್ ರೈಫಲ್ನಿಂದ ಸಿಡಿದ ಗುಂಡು ತಾಗಿ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೆ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಯೋಧ ರವಿಕಿರಣ ಮೃತಪಟ್ಟಿದ್ದಾರೆ.
ಯೋಧ ರವಿಕಿರಣ್ ರ ಪಾರ್ಥಿವ ಶರೀರ ಇಂದು (ಮೇ 21) ಆರ್ಜಿ ಕ್ಯಾಂಪ್ಗೆ ತಲುಪಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಮಾನ್ವಿ ಪಟ್ಟಣದ ಆರ್ಜಿ ಕ್ಯಾಂಪ್ನಲ್ಲಿ ಯೋಧನ ಅಂತ್ಯಕ್ರಿಯೆ ನೆರವೇರಿದೆ. ಯೋಧ ರವಿಕಿರಣ್ ಅಂತ್ಯಕ್ರಿಯೆಯಲ್ಲಿ ಮಾನ್ವಿ ಶಾಸಕ ಹಂಪಯ್ಯ ನಾಯಕ್ ಮತ್ತು ಗ್ರಾಮಸ್ಥರು ಯೋಧನಿಗೆ ಅಂತಿಮ ನಮನ ಸಮರ್ಪಿಸಿದರು.
- Advertisement -