- Advertisement -
- Advertisement -
ಮಂಗಳೂರು: ಒಂದು ವಾರದ ಲಾಕ್‌ಡೌನ್ ಮುಗಿದರೂ ಸಂಡೇ ಸಂಪೂರ್ಣ ಲಾಕ್‌ಡೌನ್ ಈ ಭಾನುವಾರ ಮುಂದುವರಿಯಲಿದೆ.
ಕೋವಿಡ್ ವೈರಸ್ ನಿಯಂತ್ರಿಸುವ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದ್ದು ಇದೀಗ ಲಾಕ್‌ಡೌನ್ ಸಂಪೂರ್ಣ ತೆರವುಗೊಳಿಸಲಾಗಿದೆ. ಆದರೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆ ತನಕ ಕರ್ಫ್ಯೂ ಚಾಲ್ತಿಯಲ್ಲಿದೆ. ಆದರೆ ನಾಲ್ಕನೇ ಭಾನುವಾರದ ಲಾಕ್‌ಡೌನ್ ನಡೆಯಲಿದ್ದು, ಶನಿವಾರ ರಾತ್ರಿ 9 ಗಂಟೆಯಿಂದ ಇದು ಜಾರಿ ಬರಲಿದೆ. ಸಂಡೇ ಲಾಕ್‌ಡೌನ್ ಸಂದರ್ಭ ಸಂಪೂರ್ಣ ವಾಣಿಜ್ಯ, ವ್ಯವಹಾರ ಮತ್ತು ವಾಹನಗಳ ಓಡಾಟ ಸ್ಥಗಿತಗೊಳ್ಳಲಿದೆ. ಹಾಲು, ಔಷಧಿ ಅಂಗಡಿಗಳು ತೆರೆಯಲಿದೆ. ವಾಹನ ಓಡಾಟ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.
- Advertisement -