- Advertisement -
- Advertisement -


ಶ್ರೀ ರಾಮಾಂಜನೇಯ ಫ್ರೆಂಡ್ಸ್ , ಕೆಂಜಾರು ಇವರ ಆಶ್ರಯದಲ್ಲಿ ಪ್ರಥಮ ವರ್ಷದ ಕೆಂಜಾರು ದೀಪಾವಳಿ ಉತ್ಸವವು ಈ ವರ್ಷ ದೀಪಾವಳಿಯ ಮೂರನೇ ದಿನದಂದು ಕೆಂಜಾರಿನ ಬಾಕಿಮಾರು ಗದ್ದೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಊರಿನ ಹಿರಿಯರು, ಮಹಿಳೆಯರು, ಯುವಕರು ಹಾಗೂ ಸಮಸ್ತ ನಾಗರಿಕರು ಒಗ್ಗಟ್ಟಿನಿಂದ ಒಂದೇ ಅಂಗಳದಲ್ಲಿ ಸೇರಿ ಈ ವಿಶೇಷ ದೀಪಾವಳಿ ಸಂಭ್ರಮವನ್ನು ಆಚರಿಸಿದರು. ಕೆಂಜಾರು ಪರಿಸರದ ಜನರೆಲ್ಲರೂ ಒಂದೇ ಕುಟುಂಬದಂತೆ ಒಗ್ಗಟ್ಟಿನಿಂದ ಇದ್ದೇವೆ ಎಂಬ ಸುಂದರ ಸಂದೇಶವನ್ನು ಸಾರಿದ ಈ ಕಾರ್ಯಕ್ರಮವು ಎಲ್ಲರ ಮನಸ್ಸಿನಲ್ಲಿ ಸಂತೋಷ ಮತ್ತು ಹೆಮ್ಮೆಯನ್ನು ಮೂಡಿಸಿತು..
ಪ್ರಥಮ ಬಾರಿಗೆ ಬಾಕಿಮಾರು ಗದ್ದೆಯಲ್ಲಿ ನಡೆದ ಈ ದೀಪಾವಳಿ ಉತ್ಸವವು ಕೇವಲ ಹಬ್ಬದ ಆಚರಣೆಯಾಗಿರದೆ, ಊರಿನ ಜನರ ನಡುವಿನ ಪ್ರೀತಿ, ಸಹಕಾರ, ಸೌಹಾರ್ದತೆ ಮತ್ತು ಒಗ್ಗಟ್ಟಿನ ಪ್ರತೀಕವಾಗಿ ಮೂಡಿಬಂದಿತು.
ಒಗ್ಗಟ್ಟಿನಲ್ಲಿ ಬಲವಿದೆ, ಒಗ್ಗಟ್ಟಿನಲ್ಲಿ ಸಂತೋಷವಿದೆ ಎಂಬ ಸಂದೇಶದೊಂದಿಗೆ ಕೆಂಜಾರಿನ ದೀಪಾವಳಿ ಉತ್ಸವವು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿತು.
- Advertisement -








