Saturday, April 20, 2024
spot_imgspot_img
spot_imgspot_img

SSLC ಫಲಿತಾಂಶ: ದ.ಕ 17 ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯ 5 ವಿದ್ಯಾರ್ಥಿಗಳಿಗೆ 625 ಅಂಕ

- Advertisement -G L Acharya panikkar
- Advertisement -

ದ.ಕ/ಉಡುಪಿ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 17 ವಿದ್ಯಾರ್ಥಿಗಳು ಮತ್ತು ಉಡುಪಿ ಜಿಲ್ಲೆಯ 5 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕಗಳನ್ನು ಪಡೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ತಾಲೂಕಿನ ವಿಟ್ಲ ವಿಠ್ಠಲ್ ಜೇಸೀಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನ ಧನ್ಯಶ್ರೀ, ಬಂಟ್ವಾಳ ತಾಲೂಕಿನ ವಿಟ್ಲ ಅಳಿಕೆ ಸತ್ಯಸಾಯಿ ಲೋಕಸೇವಾ ಹೈಸ್ಕೂಲ್ ನ ಸುಜಯ್ ಬಿ., ಬೆಳ್ತಂಗಡಿ ತಾಲೂಕಿನ ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರೋಷನ್, ಸುಳ್ಯ ತಾಲೂಕಿನ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಸಾತ್ವಿಕ್ ಹೆಚ್.ಎಸ್., ಮೂಡಬಿದಿರೆ ತಾಲೂಕಿನ ಆಳ್ವಾಸ್ ಕನ್ನಡ ಮಾಧ್ಯಮ ಹೈಸ್ಕೂಲ್ ನ ಇಂದಿರಾ ಅರುಣ್ ನ್ಯಾಮಗೌಡರ್, ಈರಯ್ಯ ಶ್ರೀಶೈಲ್ ಶೇಗುಣಸಿಮರ್, ಕಲೇಶ್ವರ್ ಪುಂಡಲೀಕ ನಾಯ್ಕ, ಶ್ರೇಯಾ ಶೆಟ್ಟಿ, ಸುದೇಶ್ ದತ್ತಾತ್ರೇಯ ಕಿಲ್ಲೇದಾರ್, ಪುತ್ತೂರು ತಾಲೂಕಿನ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನ ಅಭಯ್ ಶರ್ಮಾ, ಅಭಿಜ್ಞಾ, ಅತ್ಮೀಯ ಕಶ್ಯಪ್, ಬೆಳ್ತಂಗಡಿ ತಾಲೂಕಿನ ಸೇಂಟ್ ಮೇರೀಸ್ ಹೈಸ್ಕೂಲ್ ನ ಮಧುಶ್ರೀ, ಮೂಡಬಿದಿರೆ ತಾಲೂಕಿನ ರೋಟರಿ ಹೈಸ್ಕೂಲ್ ನ ಶ್ರೀಜಾ ಹಬ್ಬಾರ್‌, ಸ್ಪಸ್ಕಿ, ಮಂಗಳೂರು ತಾಲೂಕಿನ ಮೂಲ್ಕಿ ವ್ಯಾಸ ಮಹರ್ಷಿ ವಿದ್ಯಾಪೀಠದ ಅಕ್ಷತಾ ಕಾಮತ್, ವೀಕ್ಷಾ ಶೆಟ್ಟಿ 625 ಅಂಕಗಳನ್ನು ಪಡೆದಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಉಡುಪಿ ತಾಲೂಕಿನ ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನ ಗಾಯತ್ರಿ, ಕುಂದಾಪುರ ತಾಲೂಕಿನ ಕಾಳಾವರ ಸರ್ಕಾರಿ ಹೈಸ್ಕೂಲ್ ನ ನಿಶಾ, ಉಡುಪಿ ತಾಲೂಕಿನ ಮಲ್ಪೆ ಸರ್ಕಾರಿ ಜೂನಿಯರ್ ಕಾಲೇಜಿನ ಪುನೀತ್ ನಾಯ್ಕ, ಕುಂದಾಪುರ ತಾಲೂಕಿನ ಸಿದ್ಧಾಪುರ ಸರ್ಕಾರಿ ಹೈ ಸ್ಕೂಲ್ ನ ವೈಷ್ಣವಿ ಶೆಟ್ಟಿ, ಬೈಂದೂರು ತಾಲೂಕಿನ ಸಾಂದೀಪನ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಅಕ್ಷತಾ 625 ಅಂಕಗಳನ್ನು ಪಡೆದಿದ್ದಾರ

ರಾಜ್ಯದಲ್ಲಿ ಒಟ್ಟು 145 ವಿದ್ಯಾರ್ಥಿಗಳು 625 ಅಂಕಗಳನ್ನು ಪಡೆದಿರುವ ಸಾಧನೆ ಮಾಡಿದ್ದಾರೆ.

- Advertisement -

Related news

error: Content is protected !!