Sunday, May 19, 2024
spot_imgspot_img
spot_imgspot_img

ಈ ವಾರವೇ ಎಸ್​ಎಸ್​ಎಲ್​​ಸಿ ಫಲಿತಾಂಶ: ಆನ್​ಲೈನ್​ನಲ್ಲಿ ನೋಡೋದು ಹೇಗೆ?

- Advertisement -G L Acharya panikkar
- Advertisement -
This image has an empty alt attribute; its file name is shri-energy-solar-667x1024.jpeg

ಲೋಕಸಭೆ ಚುನಾವಣೆಯ ಕಾರಣ ಈ ವರ್ಷ ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶ ತುಸು ತಡವಾಗಿದ್ದು, ಈ ವಾರವೇ ಪ್ರಕಟವಾಗುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮಂಗಳವಾರ ನಡೆಯಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಮೇ 9 ಅಥವಾ 10ರಂದು ಪ್ರಕಟವಾಗುವ ನಿರೀಕ್ಷೆ ಇದೆ. ಮಂಗಳವಾರ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯುವ ಕಾರಣ ಫಲಿತಾಂಶ ವಿಳಂಬವಾಗುತ್ತಿದೆ. ಆದಾಗ್ಯೂ, ಇದೇ ವಾರ ಪ್ರಕಟವಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ, ಫಲಿತಾಂಶದ ದಿನಾಂಕವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದ ದಿನ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಯ ಅಧಿಕೃತ ವೆಬ್​ಸೈಟ್​​ಗಳಾದ kseab.karnataka.gov.in ಮತ್ತು karresults.nic.in ಗಳಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು. ಅಂಕಪಟ್ಟಿ ಬರುವುದು ತಡವಾಗುವ ಕಾರಣ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಈ ವೆಬ್​ಸೈಟ್‌ಗಳಲ್ಲಿ ಸಿಗುವ ಫಲಿತಾಂಶವನ್ನೇ ಡೌನ್‌ಲೋಡ್‌ ಮಾಡಿಕೊಳ್ಳಬಹುದು

- Advertisement -

Related news

error: Content is protected !!