Tuesday, June 9, 2026
spot_imgspot_img
spot_imgspot_img

ರಾಜ್ಯದಲ್ಲಿ ಇಂದು 9894 ಮಂದಿಗೆ ಕೊರೊನಾ ಸೋಂಕು..!* ದಕ್ಷಿಣ ಕನ್ನಡದಲ್ಲಿ 404, ಉಡುಪಿ 126 ಮಂದಿಗೆ ಕೊರೊನಾ ಸೋಂಕು : ರಾಜ್ಯದಲ್ಲಿ ಇಂದು 104 ಸೋಂಕಿತರ ಸಾವು.

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿಸಿದೆ. ಇಂದು ಒಂದೇ ದಿನ 9894 ಮಂದಿ ಮೇಲೆ ಅಟ್ಯಾಕ್ ಮಾಡಿದೆ. ಅಲ್ಲದೇ,104 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.ಹೀಗಾಗಿ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 459445 ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿ ಈವರೆಗೆ 352958 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ ವೈರಸ್ 3479 ಮಂದಿಗೆ ವಕ್ಕರಿಸಿದೆ. ಬೆಂಗಳೂರು ಒಂದರಲ್ಲೇ 45 ಮಂದಿ ಸೋಂಕಿತರು ಪ್ರಾಣ ಕಳೆದುಕೊಂಡಿದೆ. ಸಂಖ್ಯೆ ನಗರದಲ್ಲಿ ಇಂದು 3270 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ನಗರದಲ್ಲಿ ಸಕ್ರಿಯ ಪ್ರಕರಣದ 41093 ಮಂದಿಯಲ್ಲಿ  ಪತ್ತೆಯಾಗಿದೆ.

ಮಂಗಳೂರು:- ದ.ಕ ಜಿಲ್ಲೆಯಲ್ಲಿ ಇಂದು ಕೂಡ ಕೊರೊನಾ ರಣಕೇಕೆ ಹಾಕಿದೆ. ಇಂದು ಕೂಡ 404 ಮಂದಿಗೆ ಸೋಂಕು ತಗುಲಿದೆ. ಇಂದು 3 ಮಂದಿ  ಕೊರೊನಾಗೆ ಬಲಿಯಾಗಿದ್ದಾರೆ. 174 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 17363 ಆಗಿದ್ದು, ಇಲ್ಲಿಯವರೆಗೆ 12989 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.3934 ಮಂದಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಒಟ್ಟು ಜಿಲ್ಲೆಯಲ್ಲಿ 442 ಮಂದಿ ಸೊಂಕಿಗೆ ಬಲಿಯಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 126 ಮಂದಿಗೆ ಪತ್ತೆಯಾಗಿದೆ. ಒಟ್ಟು ಸೊಂಕಿತರ ಸಂಖ್ಯೆ 14046 ಆಗಿದ್ದು ,ಇಲ್ಲಿಯವರೆಗೆ 12043 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.1874 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Related news

error: Content is protected !!