Monday, July 7, 2025
spot_imgspot_img
spot_imgspot_img

ಕಲ್ಯಾಣ ಮಂಟಪದಲ್ಲಿ ಮದುವೆ ನಡೆಸಲು ಅವಕಾಶ; ಹೋಟೆಲ್‌, ಪಾರ್ಟಿ ಹಾಲ್ ಮತ್ತು ರೆಸಾರ್ಟ್​​​​ಗಳಿಗೂ ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

- Advertisement -
- Advertisement -

ಬೆಂಗಳೂರು: ಕಲ್ಯಾಣ ಮಂಟಪ, ಹೋಟೆಲ್‌, ಪಾರ್ಟಿ ಹಾಲ್ ಮತ್ತು ರೆಸಾರ್ಟ್​​ಗಳಲ್ಲಿ 40 ಜನಕ್ಕೆ ಸೀಮಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹೊಸದಾಗಿ ಕಾಣಿಸಿಕೊಳ್ತಿರುವ ಡೆಲ್ಟಾ ಪ್ಲಸ್​ ವೈರಸ್​​ ಸೋಂಕಿನ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಇಂದು ಮಹತ್ವದ ಸಭೆ ನಡೆಸಿತು. ಈ ಸಭೆಯಲ್ಲಿ ಕೋವಿಡ್ 19ರ ರೂಪಾಂತರಿ ಡೆಲ್ಟಾ ಪರಿಸ್ಥಿತಿ ಬಗ್ಗೆ ಪರಾಮರ್ಶೆ ನಡೆಯಿತು. ರಾಜ್ಯದಲ್ಲಿ ಡೆಲ್ಟಾ ವೈರಸ್ ಸದ್ಯಕ್ಕೆ ಹತೋಟಿಯಲ್ಲಿದ್ದು ವೈರಸ್ ಬಗ್ಗೆ ತೀವ್ರ ನಿಗಾ ಇಡಲು ಸೂಚನೆ ಸಿಕ್ಕಿದೆ.

ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೆಲ್ಟಾ ವೈರಸ್ ಕಂಡುಬರುತ್ತಿದೆ ಬಾರ್ಡರ್​ಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಯಿತು.

ಸರ್ಕಾರದ ನಿರ್ಧಾರವೇನು?

  • ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರ ಬಗ್ಗೆ ತೀವ್ರ ನಿಗಾ ಇಡುವುದು, ಅವರನ್ನ ಕೊರೊನಾ ಟೆಸ್ಟ್​ಗೆ ಒಳಪಡಿಸುವುದು
  • ಅಪೌಷ್ಟಿಕತೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಪೌಷ್ಟಿಕ ಆಹಾರ ಒದಗಿಸುವುದು, ಅಲ್ಲದೇ ಸೂಕ್ತ ವೈದ್ಯಕೀಯ ‌ನಿಗಾ ವಹಿಸಲು ಸೂಚನೆ
  • ಕಲ್ಯಾಣ ಮಂಟಪ, ಹೋಟೆಲ್‌ ಪಾರ್ಟಿ ಹಾಲ್ ಮತ್ತು ರೆಸಾರ್ಟ್​ಗಳಲ್ಲಿ 40 ಜನಕ್ಕೆ ಸೀಮಿತಗೊಳಿಸಿ ಅನುಮತಿ, ವೈಯಕ್ತಿಕ ಪಾಸ್​ಗಳೊಂದಿಗೆ ಸೋಮವಾರದಿಂದ ಜಾರಿ
  • ಮದುವೆ ಸಮಾರಂಭಗಳಿಗೂ 40 ಜನಕ್ಕೆ ಅನುಮತಿ
- Advertisement -

Related news

error: Content is protected !!