ದ.ಕ ಜಿಲ್ಲಾಡಳಿತ, ದ.ಕ ಜಿಲ್ಲಾ ಪಂ,ಶಾಲಾ ಶಿಕ್ಷಣ ಉಪನಿರ್ದೆಶಕರ ಕಛೇರಿ ಮಂಗಳೂರು, ಪುತ್ತೂರು ಉಪವಿಭಾಗ ಅಧಿಕಾರಿ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇದರ ಸಹಯೋಗದೊಂದಿಗೆ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ನೇತೃತ್ವದಲ್ಲಿ ರಾಜ್ಯ ಮಟ್ಟದ 17 ರ ವಯೋಮಾನದ ಪ್ರೌಢ ಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ ಕ್ರೀಡಾ ಕಾರಂಜಿ ತಾಲೂಕು ಕ್ರೀಡಾಂಗಣದಲ್ಲಿ ನಾಲ್ಕು ದಿನಗಳಿಂದ ಅದ್ಬುತವಾಗಿ ಮೂಡಿಬಂದಿದೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು,ಶ್ರೀ ಬಿ ರಮಾನಾಥ್ ರೈ ಮಾಜಿ ಸಚಿವರು ಕರ್ನಾಟಕ ಸರಕಾರ,ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಸಮಿತಿಯ ಸದಸ್ಯರು ಮಲ್ಲಿಕಾ ಪಕ್ಕಳ,ವಿದ್ಯಾಂಗ ನಿಧಿಯ ದಯಾನಂದ,ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್,
ಬಂಟರ ಸಂಘದ ನಿರ್ದೇಶಕರು ದಯಾನಂದ ರೈ ಮನವಳಿಕೆ, ಭುವನೇಶ್ ಜಿಲ್ಲಾ ದೈ.ಶಿಕ್ಷಣಾಧಿಕಾರಿ ಮಂಗಳೂರು, ಶ್ರೀ ಎಂ ಬಿ ವಿಶ್ವನಾಥ್ ರೈ ನಿವೃತ್ತ ಪ್ರಬಂಧಕರು ವಿಜಯ ಬ್ಯಾಂಕ್,ಸುಮಾ ಅಶೋಕ್ ರೈ,ರವಿಂದ್ರ ರೈ ನುಳಿಯಾಲ್, ಶ್ರೀಮತಿ ಲಿಲ್ಲಿ ಪಾಯಸ್ ಜಿಲ್ಲಾಧ್ಯಕ್ಷರು ಕ.ರಾ.ದೈಹಿಕ ಶಿ.ಶಿ.ಸಂಘ,ದಂಬೆಕಾನ ಸದಾಶಿವ ರೈ,ಸುಂದರ ಗೌಡ ಪುತ್ತೂರು ದೈಹಿಕ ಶಿಕ್ಷಣ,ಪರಿವೀಕ್ಷಣಾಧಿಕಾರಿ,ದಯಾನಂದ ರೈ ಕೊರ್ಮಂಡ,ಅನಿತಾ ಹೇಮನಾಥ ಶೆಟ್ಟಿ ಮಾಜಿ ಜಿಲ್ಲಾ ಪಂ.ಸದಸ್ಯರು,ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ,ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಯಲಕ್ಷ್ಮಿ ,ದೈಹಿಕ ಶಿಕ್ಷಕರು,ಕ್ರೀಡಾಪಟುಗಳು, ಉಪಸ್ಥಿತರಿದ್ದರು.
ಕ್ರೀಡಾಕೂಟದಿಂದ ದಕ್ಷಿಣ ಕನ್ನಡ ಪರವಾಗಿ ಪುತ್ತೂರ ತಾಲೂಕಿನಿಂದ ರಾಷ್ಟ್ರ ಮಟ್ಟಕ್ಕೆ ಚರಿಷ್ಮಾ ಕಡಬ,ಚೈತನ್ಯ ಬೆಥನಿ ನೂಜಿಬಾಳ್ತಿಲ,ವಿಲಾಸ್ ರಾಮಕುಂಜೇಶ್ವರ,ತನುಶ್ರೀ ಪ್ರತಿಭಾ ಶಾಲೆ,ಪೃಥ್ವಿರಾಜ್ ಮೋರಾರ್ಜಿ ದೇಸಾಯಿ ಬಲ್ನಾಡ್ ಈ ಐದು ವಿಧ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ:- ವಿದ್ಯಾನಗರ ಸ್ಪೋರ್ಟ್ಸ್ ಶಾಲೆ ಬೆಂಗಳೂರು 21 ಅಂಕದ ಮೂಲಕ ಚಾಂಪಿಯನ್ ಆಗಿ ದಕ್ಷಿಣ ಕನ್ನಡ 17 ಅಂಕದೊಂದಿಗೆ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದೆ
ಬಾಲಕಿಯರ ವಿಭಾಗದಲ್ಲಿ:-ದಕ್ಷಿಣ ಕನ್ನಡ ಜಿಲ್ಲೆ 44 ಅಂಶದೊಂದಿಗೆ ಪ್ರಶಸ್ತಿ ಪಡೆದು ಚಾಂಪಿಯನ್ ಪ್ರಶಸ್ತಿ ಪಡೆದು, ಶಿರಸಿ 21 ಅಂಶದೊಂದಿಗೆ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದೆ.
ಸಮಗ್ರ ಪ್ರಶಸ್ತಿಯನ್ನು ಬಾಲಕರ,ಬಾಲಕಿಯರ 61 ಅಂಕಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಕೂಟದಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದೆ.