Wednesday, May 8, 2024
spot_imgspot_img
spot_imgspot_img

ಮಾಣಿ ಬಾಲವಿಕಾಸ ಶಾಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ರೋಬೋಟಿಕ್ಸ್ ಲ್ಯಾಬ್ ಉದ್ಘಾಟನೆ ಹಾಗೂ ಕಂಪ್ಯೂಟರ್ ಲ್ಯಾಬ್ ಮೇಲ್ದರ್ಜೆಗೆ

- Advertisement -G L Acharya panikkar
- Advertisement -

ವಿಟ್ಲ: ತಂತ್ರಜ್ಞಾನ ಯುಗದಲ್ಲಿ ಹೊಸ ಅನ್ವೇಷಣೆಗಳ ಬಗ್ಗೆ ಮಾಹಿತಿ ಹಾಗೂ ಕಲಿಕೆಗೆ ಸೂಕ್ತವಾದ ಪ್ರಯೋಗಾಲಯ ಇಂದಿನ ಮಕ್ಕಳಿಗೆ ಅತ್ಯವಶ್ಯಕ. ಪ್ರಸ್ತುತ ವೈಜ್ಞಾನಿಕ ಅನ್ವೇಷಣೆಯ ಕುತೂಹಲಗಳನ್ನು ಅರಿತು ಕಲಿಕಾ ಪ್ರಕ್ರಿಯೆಗಳಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ರೋಬೋಟಿಕ್ಸ್ ಪ್ರಯೋಗಾಲಯಗಳ ಜೊತೆಗೆ ವಿದ್ಯಾಸಂಸ್ಥೆಯ ಕಂಪ್ಯೂಟರ್ ಕೊಠಡಿಯನ್ನು ಮೇಲ್ದರ್ಜೆಗೆ ಏರಿಸಲಾಯಿತು. ತರಗತಿಯ ಪ್ರತಿಯೊಂದು ಮಗುವಿಗೂ ಪ್ರತ್ಯೇಕ ಗಣಕಯಂತ್ರ ಸಿಗುವ ಮೂಲ ಕಲ್ಪನೆಯೊಂದಿಗೆ 40 ವೈಫೈ ಸೌಲಭ್ಯಗಳುಳ್ಳ ಗಣಕಯಂತ್ರದ ಕೊಠಡಿಯನ್ನು ಮಕ್ಕಳ ಕಲಿಕೆಗೆ ಸಜ್ಜುಗೂಳಿಸಲಾಗಿದೆ.

ಮೂರನೇ ತರಗತಿಯಿಂದ ಮೇಲ್ಪಟ್ಟು ಪ್ರತಿಯೊಂದು ಮಗುವಿಗೂ ಈ ವ್ಯವಸ್ಥೆಯ ಪ್ರಯೋಜನವಾಗಲಿದೆ. ಈ ನೂತನ ಪ್ರಯೋಗಾಲಯವನ್ನು ಲೋಕಾರ್ಪಣೆ ಮಾಡಿದ ಖ್ಯಾತ ನಿವೃತ್ತ ಶಿಕ್ಷಕ ಸುರೇಶ ಶೆಟ್ಟಿ, ಕಂಪ್ಯೂಟರ್ ಶಿಕ್ಷಣ ಇಂದಿನ ದಿನಗಳಲ್ಲಿ ಅತೀ ಅಗತ್ಯವಾಗಿದ್ದು, ಇದರ ಜೊತೆಗೆ ವಿದ್ಯಾರ್ಥಿಗಳು ಪುಸ್ತಕ ಹಾಗೂ ದಿನ ಪತ್ರಿಕೆಗಳನ್ನು ಓದುತ್ತಾ ಸಾಮಾನ್ಯ ಜ್ಞಾನವನ್ನು ವೃದ್ದಿಸಿಕೊಳ್ಳುವಂತೆ ಕಿವಿಮಾತನ್ನು ತಿಳಿಸಿದರು.

ಪ್ರಹ್ಲಾದ್ ಶೆಟ್ಟಿ ಜೆ, ಮಹೇಶ್ ಶೆಟ್ಟಿ ಜೆ, ವಿಜಯಲಕ್ಷ್ಮಿ ವಿ.ಶೆಟ್ಟಿ, ಕಂಪ್ಯೂಟರ್ ಶಿಕ್ಷಕರಾದ ಸೌಮ್ಯ ಕೆ, ಐವನ್ ಡಿ ಕುನ್ಹ, ಜೀವಿತ ಕೆ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರವೀಂದ್ರ ದರ್ಬೆ ಸ್ವಾಗತಿಸಿ, ವಿಜಯಲಕ್ಷ್ಮಿ ವಿ. ಶೆಟ್ಟಿ ವಂದಿಸಿದರು.

- Advertisement -

Related news

error: Content is protected !!